Publish Date: Sat, 21 Jun 2025 (10:23 IST)
Updated Date: Sat, 21 Jun 2025 (10:32 IST)
ಬೆಂಗಳೂರು: ಇಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಮಲ್ಲೇಶ್ವರಂನ ಬಿಜೆಪಿ ಕಾರ್ಯಾಲಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಟಿ ಸುಧಾರಾಣಿ ಕೂಡಾ ಭಾಗಿಯಾಗಿದ್ದರು.
ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಬಿಜೆಪಿ ರಾಜ್ಯಾಧ್ಯ ಬಿವೈ ವಿಜಯೇಂದ್ರ, ಶಾಸಕ ಡಾ ಸಿಎನ್ ಅಶ್ವತ್ಥ ನಾರಾಯಣ್, ಎಂಎಲ್ ಸಿ ಎನ್ ರವಿಕುಮಾರ್ ಸೇರಿದಂತೆ ಬಿಜೆಪಿ ನಾಯಕರು, ಬೆಂಬಲಿಗರು, ಮಕ್ಕಳು ಭಾಗಿಯಾಗಿದ್ದರು. ಇವರ ಜೊತೆಗೆ ನಟಿ ಸುಧಾರಾಣಿ, ನಟ ಕೋಮಲ್ ಕೂಡಾ ಭಾಗಿಯಾದರು.
ಅಂತಾರಾಷ್ಟ್ರೀಯ ಯೋಗ ಪಟುಗಳ ಮಾರ್ಗದರ್ಶನದಲ್ಲಿ ಎಲ್ಲರೂ ವಿವಿಧ ಯೋಗಾಸನಗಳನ್ನು ಮಾಡಿದರು. ಬಳಿಕ ವೇದಿಕೆ ಕಾರ್ಯಕ್ರಮದಲ್ಲೂ ಈ ಎಲ್ಲಾ ಗಣ್ಯರು ಇದ್ದು ಯೋಗ ದಿನಕ್ಕೆ ಶುಭ ಹಾರೈಸಿದರು.
ಇಂದು ವಿಶ್ವ ಯೋಗ ದಿನವಾಗಿದ್ದು ಪ್ರಧಾನಿ ನರೇಂದ್ರ ಮೋದಿ ವಿಶಾಖಪಟ್ಟಣಂನಲ್ಲಿ ನಡೆದ ಬೃಹತ್ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಿ ಯೋಗಾಸನ ಮಾಡಿದ್ದಾರೆ.