Select Your Language

Notifications

webdunia
webdunia
webdunia
webdunia

ಇದು ಅಸಹಿಷ್ಣುತೆಯ ಪರಮಾವಧಿಯಲ್ಲವೇ ಸಿದ್ದರಾಮಯ್ಯನವರೇ: ಪ್ರಹ್ಲಾದ್ ಜೋಶಿ ಆಕ್ರೋಶ

ಸಿಎಂ ಸಿದ್ದರಾಮಯ್ಯ

Sampriya

ಬೆಂಗಳೂರು , ಶುಕ್ರವಾರ, 20 ಜೂನ್ 2025 (18:14 IST)
ಬೆಂಗಳೂರು: ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಸೃಷ್ಟಿಸಿ, ಕಾನೂನು ಸುವ್ಯವಸ್ಥೆ ಹಾಳುಮಾಡುತ್ತಾ, ವಾಕ್ ಸ್ವತಂತ್ರ ಕಿತ್ತುಕೊಂಡು ತುಘಲಕ್ ದರ್ಬಾರ್ ನಡೆಸುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ದೂರಿದರು.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. 

ಯುವಬ್ರಿಗೇಡ್ ಆಯೋಜಿಸಿರುವ "ಇನ್ನೀಗ ಅಖಂಡ ಭಾರತ ನಿರ್ಮಿಸಿಯೇ ವಿಶ್ರಾಂತಿ" ವಿಚಾರ ಉಪನ್ಯಾಸ ಕಾರ್ಯಕ್ರಮಕ್ಕೆ
ಚಕ್ರವರ್ತಿ ಸೂಲಿಬೆಲೆ ಅವರಿಗೆ ಭಾಗವಹಿಸಲು ಅವಕಾಶ ಕೊಡಬಾರದು ಎನ್ನುವುದು ಕಾಂಗ್ರೆಸ್ ಪಕ್ಷದ ಯಾವ ಸಂಸ್ಕೃತಿ? ಇದು ಸಂವಿಧಾನ ವಿರೋಧಿ ಚಟುವಟಿಕೆಯಲ್ಲವೇ? 

ಸಾರ್ವಜನಿಕ ಕಾರ್ಯಕ್ರಮದಲ್ಲಿ ರಾಜಕೀಯ ಮಾತನಾಡಬಾರದು ಎಂದು ತಾಕೀತು ಮಾಡಿ ಪೊಲೀಸರು ನೋಟಿಸ್ ಕೊಡುವುದು ವಾಕ್ ಸ್ವತಂತ್ರ ಕಿತ್ತುಕೊಳ್ಳವುದು ಅಲ್ಲವೇ, ಇದು ಅಸಹಿಷ್ಣುತೆಯ ಪರಮಾವಧಿಯಲ್ಲವೇ ಸಿದ್ದರಾಮಯ್ಯನವರೇ?

ನಿಷೇಧಿತ PFI ನಂಟು ಹೊಂದಿರುವ SDPI ರಾಜಕೀಯ ಪಕ್ಷಕ್ಕೆ, ನೀವು, ನಿಮ್ಮ ಸರ್ಕಾರ ಬೆಂಬಲ ವ್ಯಕ್ತಪಡಿಸುತ್ತಿರುವುದು ದೇಶದ್ರೋಹದ ಕೆಲಸವಲ್ಲವೇ ಸಿದ್ದರಾಮಯ್ಯನವರೇ?

ರಾಜ್ಯದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣ ಮಾಡಿ ವಾಕ್ ಸ್ವತಂತ್ರ ಕಿತ್ತುಕೊಂಡು ತುಷ್ಠಿಕರಣ ರಾಜಕಾರಣದ ರೂವಾರಿ ಕಾಂಗ್ರೆಸ್. ದೇಶದ ಪರ ಮಾತನಾಡುವವರ ವಿರುದ್ಧ ಪ್ರಕರಣಗಳನ್ನು ದಾಖಲಿಸುವುದು, ಅವರ ಮನೆಗಳಿಗೆ ರಾತ್ರೋರಾತ್ರಿ ನುಗ್ಗುವುದು, ಗಡಿಪಾರು ಅಸ್ತ್ರ ಬಳಸುವುದು, ಜಿಲ್ಲೆಗಳಿಗೆ ಆಗಮಿಸದಂತೆ ನಿರ್ಬಂಧ ಹೇರುತ್ತಾ ಪೊಲೀಸರನ್ನು ತಮ್ಮ ಕೈಗೊಂಬೆಗಳಂತೆ ಮಾಡಿಕೊಂಡಿರುವುದು ನಾಚಿಕೆಗೇಡಿನ ಸಂಗತಿ.

ಕಾಂಗ್ರೆಸ್ ಪಕ್ಷದ ರಕ್ತದಲ್ಲಿ ತುರ್ತುಪರಿಸ್ಥಿತಿ ಜಾರಿ ಮಾಡುವುದು ಸಾಮಾನ್ಯವಾಗಿದೆ. ಅಂದು ಇಂದಿರಾಗಾಂಧಿ, ಇಂದು ಸಿದ್ದರಾಮಯ್ಯ ತುರ್ತುಪರಿಸ್ಥಿತಿ ತರುವ ಮೂಲಕ ಇತಿಹಾಸಕ್ಕೆ ಕಪ್ಪುಚುಕ್ಕೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಳೆಗಾಲದಲ್ಲಿ ಅಪಾಯಕಾರಿಯಾಗುವ ಮರಗಳ ತೆರವಿಗೆ ಈಶ್ವರ್ ಖಂಡ್ರೆ ಸೂಚನೆ