Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಉಪೇಂದ್ರ ರಾಜಕೀಯ ಸೇರ್ಪಡೆ ಬಗ್ಗೆ ತಂದೆ ತಾಯಿ ಹೇಳಿದ್ದು

webdunia
ಶನಿವಾರ, 12 ಆಗಸ್ಟ್ 2017 (11:28 IST)
ರಿಯಲ್ ಸ್ಟಾರ್ ಉಪೇಂದ್ರ ರಾಜಕೀಯ ಪ್ರವೇಶಕ್ಕೆ ಕ್ಷಣಗಣನೆ ಶುರುವಾಗಿದೆ. ಹಣದ ಹಂಗಿಲ್ಲದೆ ಪ್ರಜಾಕೀಯ ಮಾಡಲು ಹೊರಟಿರುವ ಉಪೇಂದ್ರ ಪ್ರಾಮಾಣಿಕ ಪ್ರಯತ್ನಕ್ಕೆ ಪೋಷಕರು ಶುಭ ಕೋರಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಉಪೇಂದ್ರ ತಂದೆ ಮಂಜುನಾಥ್, ರಾಜಕೀಯ ಪ್ರವೇಶದ ಬಗ್ಗೆ ನಮಗೆ ತಿಳಿದೇ ಇರಲಿಲ್ಲ. ಇದ್ದಕ್ಕಿದ್ದಂತೆ ರಾಜಕೀಯ ಸೇರುತ್ತಿದ್ದಾನೆ. ಅವನು ನಂಬಿರುವ ವಿನಾಯಕ ಒಳ್ಳೆಯದು ಮಾಡುತ್ತಾನೆ ಎಂದಿದ್ದಾರೆ.
ಅವರ ತಾಯಿ ಅನುಸೂಯಮ್ಮ ಸಹ ಮಗನಿಗೆ ಶುಭ ಕೋರಿದ್ದಾರೆ. ಚಿಕ್ಕಂದಿನಿಂದಲೂ ರಾಜಕೀಯಕ್ಕೆ ಸೇರಬೇಕೆಂದು ಅವನಿಗೆ ಆಸಕ್ತಿ ಇತ್ತು. ಅದರ ಸಹವಾಸ ಬೇಡವೆಂದು ಹಲವು ಬಾರಿ ಹೇಳಿದ್ದೇವೆ. ಅದಕ್ಕೆ ಯಾವುದೇ ಪ್ರತಿಕ್ರಿಯೆ ಕೊಡದೇ ನಗುತ್ತಿದ್ದ ಎಂದಿದ್ದಾರೆ.

ಉಪ್ಪಿ ರಾಜಕೀಯ ಸೇರ್ಪಡೆ ಬಗ್ಗೆ ನಮಗೆ ತಿಳಿದಿರಲೇ ಇಲ್ಲ. ಕಂಗ್ರಾಟ್ಸ್ ಹೇಳಲು ಫೋನ್ ಮಾಡಿದ್ದರು. ಯಾಕೆ ಎಂದು ಕೇಳಿದಾಗ ನಿಮ್ಮ ಮಗ ರಾಜಕೀಯಕ್ಕೆ ಬರುತ್ತಿದ್ದಾನೆ ಅಂತಾ ಹೇಳಿದರು. ಟಿವಿ ಹಾಕಿದಾಗ ವಿಷಯ ಗೊತ್ತಾಯಿತು ಎಂದು ತಾಯಿ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಜ್ವರದ ನಡುವೆಯೂ ರಾಜ್ಯದಲ್ಲಿ ರಾಹುಲ್