Publish Date: Fri, 11 Aug 2017 (11:35 IST)
Updated Date: Fri, 11 Aug 2017 (11:38 IST)
ರಿಯಲ್ ಸ್ಟಾರ್ ಉಪೇಂದ್ರ ರಾಜಕೀಯಕ್ಕೆ ಬರುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಟಿ.ಎನ್. ಸೀತಾರಾಮ್ ಅವರ ಜೊತೆ ಉಪೇಂದ್ರ ಅವರು ರಾಜಕೀಯದ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಮಾಧ್ಯಮವೊಂದರ ಜೊತೆ ಮಾತನಾಡಿರುವ ಟಿ.ಎನ್. ಸೀತಾರಾಮ್, ಒಳ್ಳೆಯ ವಿಚಾರಧಾರೆ, ವೈಯಕ್ತಿಕ ಪ್ರಾಮಾಣಿಕತೆ ಇರುವ ಉಪೇಂದ್ರ ಅವರು ರಾಜಕೀಯಕ್ಕೆ ಬರುವುದು ಉತ್ತಮ ಎಂದು ಹೇಳಿದ್ದಾರೆ. ಸಿನಿಮಾಗಳಲ್ಲಿ ಹೊಸ ಹೊಸ ದೃಷ್ಟಿಕೋನಗಳನ್ನ ತೋರಿಸಿ ಜನರ ಮೆಚ್ಚುಗೆ ಗಳಿಸಿದ್ದಾರೆ. ವ್ಯವಸ್ಥೆಯಲ್ಲಿನ ಪ್ರಾಮಾಣಿಕ ಪ್ರಯತ್ನಗಳು ಒಂದೇ ಇರುತ್ತೆ. ಅಂಥಹವರು ಉಪೆಂದ್ರ ಎಂದು ನಿರ್ದೇಶಕ ಟಿ.ಎನ್. ಸೀತಾರಾಂ ಅವರು ಹೇಳಿದ್ದಾರೆ.
ಯಾರ ಜೊತೆಯೂ ಹೋಗದೇ ಉಪೇಂದ್ರ ಅವರು ಹೊಸ ಪಕ್ಷ ಕಟ್ಟುವುದು ಉತ್ತಮ. ಆದರೆ, ಅದು ಅಗ್ನಿಪ್ರವೇಶವಿದ್ದಂತೆ. ಅಗ್ನಿಪ್ರವೇಶ ತಡೆದುಕೊಳ್ಳುವ ಶಕ್ತಿ ಚರ್ಮಕ್ಕೆ, ಮಾಂಸಖಂಡಗಳಿಗೆ, ಮನಸ್ಸಿಗೆ, ಮೆದುಳಿಗೆ, ಬುದ್ಧಿಗೆ ಬೇಕು ಎಂದು ಸೀತಾರಾಂ ಹೇಳಿದ್ದಾರೆ. ಪ್ರಾಮಾಣಿಕವಾಗಿ ಯೋಚಿಸುವ ುಪೇಂದ್ರ ಅವರಿಗೆ ರಾಜಕೀಯ ಪ್ರವೇಶಕ್ಕೆ ಕಾಲ ಪಕ್ವವಾಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ