Select Your Language

Notifications

webdunia
webdunia
webdunia
webdunia

ಇಂದು ಮಹತ್ವದ ಸುದ್ದಿ ಸ್ಪೋಟಿಸುತ್ತಾರಾ ಉಪೇಂದ್ರ?!

webdunia
Bangalore , ಶನಿವಾರ, 12 ಆಗಸ್ಟ್ 2017 (07:47 IST)
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ರಾಜಕೀಯ ಸೇರುವುದು ನಿಶ್ಚಿತವಾಗಿದೆ. ಹೀಗಿರುವಾಗ ಅವರು ಯಾವ ಪಕ್ಷ ಸೇರಿಕೊಳ್ಳಲಿದ್ದಾರೆ ಎಂಬುದೇ ಎಲ್ಲರ ಕುತೂಹಲ.

 
ತಮ್ಮ ಸಿನಿಮಾದಲ್ಲಿ ಯಾವಾಗಲೂ ರಾಜಕೀಯ ನಾಯಕರಿಗೆ ಛಾಟಿ ಬೀಸುವ ಉಪೇಂದ್ರ ಯಾವ ಪಕ್ಷ ಸೇರುತ್ತಾರೆ? ಅಥವಾ ಸ್ವಂತ ಪಕ್ಷ ಕಟ್ಟುತ್ತಾರಾ ಎಂದು ಸದ್ಯದ ಕುತೂಹಲವಾಗಿದೆ.

ಈ ಎಲ್ಲಾ ಪ್ರಶ್ನೆಗಳಿಗೆ ಇಂದು ಬೆಳಿಗ್ಗೆ ಪತ್ರಿಕಾಗೋಷ್ಟಿ ನಡೆಸಲಿರುವ ಉಪೇಂದ್ರ ಉತ್ತರಿಸುತ್ತಾರೆ ಎಂಬ ವರದಿಯನ್ನು ಖಾಸಗಿ ವಾಹಿನಿಗಳು ವರದಿ ಮಾಡಿವೆ. ಇದೇ ವೇಳೆ ಬೆಂಗಳೂರಿನಲ್ಲಿ ಬಿಜೆಪಿ ನಾಯಕರೊಂದಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸಭೆ ನಡೆಸಲಿದ್ದಾರೆ.

ಆ ಸಭೆಗೆ ಆಗಮಿಸುವಂತೆ ಉಪೇಂದ್ರ ಆಹ್ವಾನ ನೀಡಲಾಗಿದೆ ಎಂದು ವರದಿಯಾಗಿದೆ. ಅದೆಲ್ಲಾ ಇರಲಿ, ತಮ್ಮ 50 ನೇ ಸಿನಿಮಾದ ತಯಾರಿ ಬಿಟ್ಟು ರಾಜಕೀಯದ ಕಡೆಗೆ ಉಪೇಂದ್ರ ಹೆಚ್ಚು ಗಮನಹರಿಸಿದ್ದಾರೆ ಎಂಬುದಂತೂ ಸತ್ಯ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಾಮಾಜಿಕ ಜಾಲತಾಣದಲ್ಲಿ ಬೆತ್ತಲಾದ ನಟಿ..?