Select Your Language

Notifications

webdunia
webdunia
webdunia
webdunia

ಉಪೇಂದ್ರಗೆ ಬಿಜೆಪಿ ಗಾಳ.. ನಾಳೆ 11 ಗಂಟೆಗೆ ಎಲ್ಲವೂ ಬಹಿರಂಗ..?

ಉಪೇಂದ್ರಗೆ ಬಿಜೆಪಿ ಗಾಳ.. ನಾಳೆ 11 ಗಂಟೆಗೆ ಎಲ್ಲವೂ ಬಹಿರಂಗ..?
ಬೆಂಗಳೂರು , ಶುಕ್ರವಾರ, 11 ಆಗಸ್ಟ್ 2017 (15:47 IST)
ರಿಯಲ್ ಸ್ಟಾರ್ ಉಪೇಂದ್ರ ರಾಜಕೀಯ ಸೇರ್ಪಡೆಗೆ ಸಿದ್ಧತೆ ನಡೆಸಿರುವ ಬೆನ್ನಲ್ಲೇ ಬಿಜೆಪಿ ಪಕ್ಷದಿಂದ ಉಪೇಂದ್ರ ಅವರನ್ನ ಸೆಳೆಯಲು ಪ್ರಯತ್ನ ನಡೆದಿದೆ ಎಂದು ವರದಿಗಳು ಕೇಳಿ ಬರುತ್ತಿವೆ.

ನಾಳೆ ಸಂಜೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿ ಚಿಂತನಾ ಸಭೆ ನಡೆಯುತ್ತಿದ್ದು, ಉಪೇಂದ್ರ ಸಹ ಈ ಸಭೆಯಲ್ಲಿ ಸಹ ಭಾಗವಹಿಸಲಿದ್ದಾರೆ ಎನ್ನಲಾಗಿದೆ. ಸಭೆಯಲ್ಲಿ ಚಿಂತಕರು, ಬರಹಗಾರರು ಸೇರಿ 600 ಮಂದಿಗೆ ಆಹ್ವಾನ ನೀಡಲಾಗಿದ್ದು, ಉಪೇಂದ್ರ ಸಹ ಅದರಲ್ಲಿ ಒಬ್ಬರು ಎನ್ನಲಾಗಿದೆ. ಉಪೇಂದ್ರ ಬಿಜೆಪಿ ಚಿಂತನಾ ಸಭೆಯಲ್ಲಿ ಭಾಗವಹಿಸುತ್ತಿರುವುದು ಹಲವು ಊಹಾಪೋಗಳಿಗೆ ಎಡೆಮಾಡಿದೆ.

ಈ ಮಧ್ಯೆ, ನಾಳೆ 11 ಗಂಟೆಗೆ ಉಪೇಂದ್ರ ಪ್ರೆಸ್ ಮೀಟ್ ಸಹ ನಡೆಸುತ್ತಿದ್ದು ಎಲ್ಲ ಊಹಾಪೋಹಗಳಿಗೆ ತೆರೆ ಎಳೆಯುತ್ತಿದ್ದಾರಂತೆ. ನಾಳೆ ಉಪೇಂದ್ರ ಪ್ರಕಟಿಸುವ ನಿರ್ಧಾರದ ಬಗ್ಗೆ ಭಾರೀ ಕುತೂಹಲ ಮನೆ ಮಾಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶಾಸಕ ಜಮೀರ್ ಅಹಮ್ಮದ್ ಹೆಸರಲ್ಲಿ ಹಣ ಪಡೆದು ವಂಚಿಸಿದ ಯುವತಿ..!