Publish Date: Wed, 16 Aug 2023 (14:52 IST)
Updated Date: Wed, 16 Aug 2023 (17:56 IST)
ತಮ್ಮ ವಿರುದ್ಧ ದಾಖಲಾಗಿರುವ ಅಟ್ರಾಸಿಟಿ ಪ್ರಕರಣ ಸಂಬಂಧ ನಟ ಉಪೇಂದ್ರ ಇಂದು ಮತ್ತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಹಲಸೂರು ಗೇಟ್ ಠಾಣೆ ಸೇರಿ ಉಳಿದ ಠಾಣೆಗಳ FIR ರದ್ದು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಕೇವಲ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ FIRಗೆ ಮಾತ್ರ ಹೈಕೋರ್ಟ್ ಈ ಹಿಂದೆ ತಡೆ ನೀಡಿತ್ತು. ಹೀಗಾಗಿ ಬುಧವಾರ ಮತ್ತೆ ಉಪೇಂದ್ರ ಹಿರಿಯ ವಕೀಲ ಉದಯ್ ಹೊಳ್ಳ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಬಂಧನ ಭೀತಿ ಹಿನ್ನೆಲೆ ನಟ ಉಪೇಂದ್ರ ಸದ್ಯ ಇನ್ನೂ ಅಜ್ಞಾತ ಸ್ಥಳದಲ್ಲೇ ಇದ್ದು, ಯಾರ ಕಣ್ಣಿಗೂ ಕಾಣಿಸಿಕೊಳ್ಳುತ್ತಿಲ್ಲ. ಈ ಮಧ್ಯೆ ದಲಿತ ಸಮುದಾಯವನ್ನು ನಿಂದಿಸಿರುವ ನಟ ಉಪೇಂದ್ರ ಅವರಿಗೆ ಚಿತ್ರರಂಗದಿಂದ ಐದು ವರ್ಷ ನಿಷೇಧ ಹೇರಬೇಕು ಎಂದು ಸಾಮಾಜಿಕ ಕಾರ್ಯಕರ್ತ ನವೀನ್ ಗೌಡ ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ಒತ್ತಾಯಿಸಿದ್ರು.