Select Your Language

Notifications

webdunia
webdunia
webdunia
webdunia

ನಟ ಉಪೇಂದ್ರ ನಿವಾಸದಲ್ಲಿ ಇಲ್ಲ,ಅವರ ಹೇಳಿಕೆ ನೋವುಂಟು ಮಾಡಿದೆ- ಗೋಪಾಲ ಗಿರಿಯಪ್ಪ

Gopal Giriappa
bangalore , ಸೋಮವಾರ, 14 ಆಗಸ್ಟ್ 2023 (14:00 IST)
ನಟ ಉಪೇಂದ್ರ ವಿವಾದಾತ್ಮಕ ಹೇಳಿಕೆ ಪ್ರಕರಣ ಸಂಬಂಧ ಸ್ಥಳ ಮಹಜರು ಮುಗಿಸಿ ಪೊಲೀಸರು ತೆರಳಿದ್ದಾರೆ.ಗೋಪಾಲ್ ಗಿರಿಯಪ್ಪ ಸಮ್ಮುಖದಲ್ಲಿ ಸ್ಥಳ ಮಹಜರು ಮಾಡಲಾಗಿದೆ.ಸಮಾಜ ಕಲ್ಯಾಣ ಇಲಾಖೆಗೆ ಗೋಪಾಲ ಗಿರಿಯಪ್ಪ ದೂರು ನೀಡಿದ್ದು,ಗೋಪಾಲ ಗಿರಿಯಪ್ಪ ಸಮತಾ ಸೈನಿಕ ದಳ ಯುವ ಘಟಕ ಅಧ್ಯಕ್ಷ.ಗೋಪಾಲ ಗಿರಿಯಪ್ಪ ದೂರಿನ ಮೇರೆಗೆ ಮಧುಸೂದನ್ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಧುಸೂದನ್  ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.
 
ಈ ವೇಳೆ ಮಾತನಾಡಿದ  ಸಮತಾ ಸೈನಿಕ ದಳದ ಗೋಪಾಲ ಗಿರಿಯಪ್ಪ ಫೇಸ್ ಬುಕ್ ಹಾಗೂ ಇನ್ಸ್ ಸ್ಟಾದಲ್ಲಿ ಲೈವ್ ಬಂದು ಆಕ್ಷೇಪಾರ್ಹವಾಗಿ ಮಾತನಾಡಿದ್ದಾರೆ.ನಾವು ದಲಿತರಾಗಿರೋದ್ರಿಂದ ನಮಗೆ ನೋವಾಗಿದೆ.ಈಗ ಪೊಲೀಸರು ಬಂದು ಸ್ಥಳ ಮಹಜರು ಮಾಡಿದ್ದಾರೆ.ಸಿ.ಕೆ ಅಚ್ಚುಕಟ್ಟು ಪೊಲೀಸ್ರು ಮಹಜರು ಮಾಡಿದ್ದಾರೆ.ನಮ್ಮ ಸಂಘಟನೆ ಮಖಾಂತರ ಕಂಪ್ಲೇಂಟ್ ಮಾಡಿದ್ದೇವೆ.ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ನಮಗೆ ಸಲಹೆ ಕೊಟ್ರು.ಅವರ ಸಲಹೆ ಮೇರೆ ನಾವು ದೂರು ನೀಡಿದ್ವಿ ಆದ್ರೆ ಸದಾಶಿವ ನಗರದ ಮನೆಯಲ್ಲೂ ಅವರು ಇಲ್ಲ ಎಂದು ಗೋಪಾಲ ಗಿರಿಯಪ್ಪ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೇಘಸ್ಫೋಟಕ್ಕೆ 7 ಬಲಿ! ಕೊಚ್ಚಿ ಹೋದ ಮನೆಗಳು