Publish Date: Tue, 10 Oct 2017 (10:27 IST)
Updated Date: Tue, 10 Oct 2017 (10:41 IST)
ಬೆಂಗಳೂರು: ಯಾರು ಏನೇ ಹೇಳಲಿ, ಏನೇ ಆಗಲಿ ನಾನು ಪ್ರಶಸ್ತಿ ಸ್ವೀಕರಿಸೋಕೆ ಹೋಗೇ ಹೋಗ್ತೀನಿ ಎಂದು ನಟ ಪ್ರಕಾಶ್ ರೈ ಖಡಾಖಂಡಿತವಾಗಿ ಹೇಳಿದ್ದಾರೆ.
ಡಾ. ಶಿವರಾಮಕಾರಂತ ಹೆಸರಲ್ಲಿ ಕೊಡಮಾಡುವ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಇಂದು ಪ್ರಕಾಶ್ ರೈ ಕುಂದಾಪುರ ತಾಲೂಕಿನ ಕೋಟತಟ್ಟು ಗ್ರಾಮದಲ್ಲಿ ಸ್ವೀಕರಿಸಲಿದ್ದಾರೆ.
ಇಂದು ಶಿವರಾಮ ಕಾರಂತರ ಜನ್ಮದಿನವಾದ ಇಂದು ಪ್ರಕಾಶ್ ರೈಗೆ ಹುಟ್ಟೂರ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಆದರೆ ಪ್ರಧಾನಿ ಮೋದಿ ವಿರುದ್ಧ ವ್ಯಂಗ್ಯ ಮಾಡಿರುವ ಕಾರಣ ಪ್ರಕಾಶ್ ರೈ ಪ್ರಶಸ್ತಿ ಸ್ವೀಕಾರ ಸಮಾರಂಭಕ್ಕೆ ಬಿಜೆಪಿ ನಾಯಕರು ಬಹಿಷ್ಕಾರ ಹಾಕಿದ್ದಾರೆ. ಇದೇ ಕಾರಣಕ್ಕೆ ಪ್ರಕಾಶ್ ರೈ ಏನೇ ಆದರೂ ಪ್ರಶಸ್ತಿ ಸ್ವೀಕರಿಸುವುದಾಗಿ ಹೇಳಿಕೊಂಡಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಕಾಶ್ ರೈ 'ವಿರೋಧಿಸುವುದು ಅವರ ಪ್ರಜಾಸತ್ತಾತ್ಮಕ ಹಕ್ಕು. ಕೆಲವರಿಗೆ ಪ್ರೀತಿಸಲು ಕಾರಣಗಳಿವೆ. ಕೆಲವರಿಗೆ ಇಲ್ಲ. ಜನ ಎಲ್ಲವನ್ನೂ ನಿರ್ಧರಿಸುತ್ತಾರೆ' ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ