Publish Date: Fri, 09 Feb 2024 (17:40 IST)
Updated Date: Fri, 09 Feb 2024 (17:55 IST)
ಬೆಂಗಳೂರು :ನಟ ಆದಿತ್ಯ ಅವರು ಖಾಕಿ ದಿರಿಸು ಧರಿಸಿ, ಖಡಕ್ ಪೊಲೀಸ್ ಅಧಿಕಾರಿಯ ಶೈಲಿಯಲ್ಲಿ ಪಾಸ್ ವರ್ಡ್ ಹೇಗಿರಬೇಕೆಂಬ ಬಗ್ಗೆ ಕೆಲವು ಸಲಹೆ ನೀಡಿದ್ದಾರೆ.
• ಪಾಸ್ ವರ್ಡ್ ಕನಿಷ್ಠ ಎಂಟು ಅಕ್ಷರಗಳನ್ನು ಹೊಂದಿರಬೇಕು . ಹೆಚ್ಚಿಗೆ ಇದ್ದರೂ ಪರವಾಗಿಲ್ಲ
• ಪಾಸ್ ವರ್ಡ್ ನಲ್ಲಿ ಕ್ಯಾಪಿಟೆಲ್ ಲೆಟರ್ ಮತ್ತು ಸ್ಮಾಲ್ ಲೆಟರ್ ಎರಡೂ ಇರಬೇಕು.
• ಸ್ಪೆಷಲ್ ಕ್ಯಾರೆಕ್ಟರ್ ( ಉದಾ :- !@#$%^&*) ಮತ್ತು ಅಂಕಿಗಳನ್ನೂ ಸೇರಿಸಕೊಳ್ಳಬೇಕು
• ಪಾಸ್ ವರ್ಡ್ ನ್ನು ಯಾರಿಗೂ ಊಹೆ ಮಾಡಲಾಗದ ರೀತಿಯಲ್ಲಿರಚಿಸಿರಬೇಕು
ಸೈಬರ್ ಕ್ರೈಂ ಅನ್ನು ತಡೆಗಟ್ಟಲು ಸೆನ್ ಪೊಲೀಸ್ ಇಲಾಖೆ, ಸಿಐಡಿ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದೆ. ನಟ ಆದಿತ್ಯ ಮೂಲಕ ನಮ್ಮ ಪಾಸ್ ವರ್ಡ್ ಹೇಗಿರಬೇಕೆಂಬ ಬಗ್ಗೆ ವಿಡಿಯೋ ಮಾಡಿರುವ ಪೊಲೀಸ್ ಇಲಾಖೆ ಅದನ್ನು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಜನರು ಜಾಗೃತರಾಗುವ ಮೂಲಕ ಸೈಬರ್ ಅಪರಾಧಗಳನ್ನು ತಡೆಗಟ್ಟಬಹುದು ಎಂದು ಪೊಲೀಸ್ ಇಲಾಖೆ ಹೇಳಿದೆ .