ಬಿಹಾರ್: ಲೋಕಸಭಾ ಚುನಾವಣೆ ಮುಂದಿರುವಂತೆಯೇ ಲಾಲೂ ಪ್ರಸಾದ್ ಯಾದವ್ ಗೇ ಏಟಿನ ಮೇಲೆ ಏಟು ಎದುರಾಗುತ್ತಿದೆ. ನಿತೀಶ್ ಜೊತೆಗಿನ ಮೈತ್ರಿ ಸರ್ಕಾರ ಒಂದೆಡೆ ಮುರಿದು ಬಿದ್ದಿದ್ದರೆ ಮತ್ತೊಂದೆಡೆ ಹಗರಣ ಸುತ್ತಿಕೊಳ್ಳುತ್ತಿದ್ದು ಬಂಧನ ಭೀತಿಯನ್ನೂ ಎದುರಿಸುವಂತಾಗಿದೆ. ಸರ್ಕಾರಿ ಉದ್ಯೋಗ ನೀಡಲು ಲಂಚ ಪಡೆದಿದ್ದ ಬಹುಕೋಟಿ ರೂ. ಹಗರಣದಲ್ಲಿ ಬಿಹಾರದ ಮಾಜಿ ಸಿಎಂ ಹಾಗೂ ಲಾಲೂ ಪ್ರಸಾದ್ ಯಾದವ್ ಪತ್ನಿ ರಾಬ್ರಿದೇವಿಗೆ ಮಧ್ಯಂತರ ಜಾಮೀನು ದೊರೆತಿದೆ. ಇದರಿಂದ ಬಂಧನ ಭೀತಿಯಿಂದ ತಾತ್ಕಾಲಿಕವಾಗಿ ರಿಲೀಫ್ ದೊರೆಂತಂತಾಗಿದೆ.
ಫೆ. 28 ರವರೆಗೆ ಮಧ್ಯಂತರ ಜಾಮೀನು ನೀಡಲಾಗಿದ್ದು, ಜೊತೆಗೆ ರಾಬ್ರಿ ದೇವಿ ಪುತ್ರಿಯರಾದ ಭಾರತಿ ಹಾಗೂ ಹೇಮಾ ಯಾದವ್ ಅವರಿಗೂ ಜಾಮೀನು ನೀಡಲಾಗಿದೆ. ಮೂವರ ವಿರುದ್ದವೂ ಜಾರಿ ನಿರ್ದೇಶನಲಾಯವು ಚಾರ್ಜ್ ಶೀಟ್ ದಾಖಲಿಸಿತ್ತು.