Select Your Language

Notifications

webdunia
webdunia
webdunia
webdunia

ಡಾ ಸಿಎನ್ ಮಂಜುನಾಥ್ ಗೆಲುವಿಗೆ ಸುಧಾಮೂರ್ತಿ ಹರಕೆ ಹಾಸ್ಯಾಸ್ಪದ ಎಂದ ನಟ ಚೇತನ್ ಅಹಿಂಸಾ

Chetan Ahimsa

Krishnaveni K

ಬೆಂಗಳೂರು , ಶನಿವಾರ, 1 ಜೂನ್ 2024 (09:53 IST)
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಹೃದ್ರೋಗ ತಜ್ಞ ಡಾ ಸಿಎನ್ ಮಂಜುನಾಥ್ ಗೆಲುವಿಗೆ ಡಾ ಸುಧಾಮೂರ್ತಿ ಹರಕೆ ಹೊತ್ತಿರುವುದು ಹಾಸ್ಯಾಸ್ಪದ ಎಂದು ನಟ ಚೇತನ್ ಅಹಿಂಸಾ ಹೇಳಿಕೊಂಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಬಲ ನಾಯಕ ಡಿಕೆ ಸುರೇಶ್ ವಿರುದ್ಧ ಕಣಕ್ಕಿಳಿದಿರುವ ಡಾ ಮಂಜುನಾಥ್ ಗಾಗಿ ಸುಧಾಮೂರ್ತಿ ಪಾದಯಾತ್ರೆ ಮಾಡಿ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆಯುವುದಾಗಿ ಹರಕೆ ಹೊತ್ತಿದ್ದಾರಂತೆ. ಇದನ್ನು ಸ್ವತಃ ಮಂಜುನಾಥ್ ಹೇಳಿಕೊಂಡಿದ್ದರು.

ಆದರೆ ಸುಧಾಮೂರ್ತಿಯವರ ಈ ನಿರ್ಧಾರವನ್ನು ನಟ ಚೇತನ್ ಪ್ರಶ್ನಿಸಿದ್ದಾರೆ. ಮಂಜುನಾಥ್ ಗೆಲುವಿಗಾಗಿ ಸುಧಾಮೂರ್ತಿ ವಾಮ ಮಾರ್ಗ ಹಿಡಿದಿರುವುದು ಹಾಸ್ಯಾಸ್ಪದ ಎಂದು ಚೇತನ್ ಹೇಳಿದ್ದಾರೆ.

‘ಲೋಕಸಭಾ ಚುನಾವಣೆಯಲ್ಲಿ ಸಿಎನ್ ಮಂಜುನಾಥ ಅವರ ಗೆಲುವಿಗೆ ಹರಿಕೆ ಹೊತ್ತಿದ್ದಾರೆ ಇನ್ಫೋಸಿಸ್ ನ ಸುಧಾಮೂರ್ತಿ. ಶ್ರೀಮಂತರು ಮತ್ತು ಗಣ್ಯರು ಯಾವಾಗಲೂ ವ್ಯವಸ್ಥೆಯಿಂದ ರಕ್ತ/ಬೆವರು/ಕಣ್ಣೀರಿನ ಮೂಲಕವಲ್ಲ, ಕುಶಲತೆಯಿಂದ ಪ್ರಯೋಜನ ಪಡೆದಿದ್ದಾರೆ.

ಅಂತೆಯೇ ಸುಧಾಮೂರ್ತಿ ಅವರು ತಮ್ಮ ಅಭ್ಯರ್ಥಿಯ ಗೆಲುವಿಗಾಗಿ ಬೆಂಗಳೂರು ಗ್ರಾಮಾಂತರದ ಬಿಸಿ ಬಿಸಿಲಿನಲ್ಲಿ ಪ್ರಚಾರ ಮಾಡಲಿಲ್ಲ. ಬದಲಿಗೆ ವಿವೇಚನಾರಹಿತ ವಾಮ ಮಾರ್ಗ ತೆಗೆದುಕೊಂಡರು ಎಷ್ಟು ಹಾಸ್ಯಾಸ್ಪದ’ ಎಂದು ಚೇತನ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ಯಾನ್ಸರ್ ಇದೆ, ನಿರೀಕ್ಷಣಾ ಜಾಮೀನು ನೀಡಿ ಎಂದು ಕೋರ್ಟ್ ಮೆಟ್ಟಿಲೇರಿದ್ದ ಭವಾನಿ ರೇವಣ್ಣ