Select Your Language

Notifications

webdunia
webdunia
webdunia
webdunia

ಡಿಕೆ ಸುರೇಶ್ ವಿರುದ್ಧ 40 ಸಾವಿರ ಮತಗಳಿಂದ ಡಾ ಸಿಎನ್ ಮಂಜುನಾಥ್ ಗೆಲ್ಲುತ್ತಾರಂತೆ

DK Suresh-Dr CN Manjunath

Krishnaveni K

ಬೆಂಗಳೂರು , ಶುಕ್ರವಾರ, 31 ಮೇ 2024 (12:39 IST)
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ನ ಡಿಕೆ ಸುರೇಶ್ ಮತ್ತು ಬಿಜೆಪಿಯಿಂದ ಹೃದ್ರೋಗ ತಜ್ಞ, ಸಮಾಜ ಸೇವಕ ಡಾ ಸಿಎನ್ ಮುಂಜುನಾಥ್ ನಡುವೆ ತೀವ್ರ ಪೈಪೋಟಿಯಿದೆ.

ಈ ಕ್ಷೇತ್ರದಲ್ಲಿ ಯಾರು ಗೆಲ್ಲುತ್ತಾರೆ ಎಂದು ಇಡೀ ಕರ್ನಾಟಕವೇ ಎದಿರು ನೋಡುತ್ತಿದೆ. ಯಾಕೆಂದರೆ ಡಿಕೆ ಸುರೇಶ್ ಕಾಂಗ್ರೆಸ್ ನ ಪ್ರಮುಖ ನಾಯಕ. ಕಳೆದ ಬಾರಿ ಚುನಾವಣೆಯಲ್ಲಿ ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಸೋತಿದ್ದಾಗ ಕರ್ನಾಟಕದಿಂದ ಏಕಾಂಗಿಯಾಗಿ ಕಾಂಗ್ರೆಸ್ ನಿಂದ ಗೆದ್ದವರು ಡಿಕೆ ಸುರೇಶ್.

ಅಷ್ಟೇ ಅಲ್ಲದೆ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಹೋದರ. ಹೀಗಾಗಿ ಕಾಂಗ್ರೆಸ್ ಗೆ ಇದು ಪ್ರತಿಷ್ಠೆಯ ಕಣ. ಇವರ ವಿರುದ್ಧ ಇದೇ ಮೊದಲ ಬಾರಿಗೆ ರಾಜಕೀಯ ಪ್ರವೇಶಿಸಿರುವ ಹೃದ್ರೋಗ ತಜ್ಞ, ಸಮಾಜ ಸೇವಕ ಡಾ ಸಿಎನ್ ಮಂಜುನಾಥ್ ಸ್ಪರ್ಧಿಸಿದ್ದಾರೆ.

ಕಳಂಕ ರಹಿತರಾಗಿರುವ ಮಂಜುನಾಥ್ ಗೆ ಸಮಾಜದಲ್ಲಿ ಒಳ್ಳೆಯ ಹೆಸರಿದೆ. ಹೀಗಾಗಿ ಇಬ್ಬರ ನಡುವೆ ಯಾರು ಗೆಲ್ಲುತ್ತಾರೆ ಎಂಬುದು ಕುತೂಹಲವಾಗಿದೆ. ಈ ನಡುವೆ ಸೋಷಿಯಲ್ ಮೀಡಿಯಾ ಸಮೀಕ್ಷೆಗಳು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಸುರೇಶ್ ವಿರುದ್ಧ ಮಂಜುನಾಥ್ 40 ಸಾವಿರ ಮತಗಳಿಂದ ಗೆಲ್ಲುತ್ತಾರೆ ಎಂಬ ಸುದ್ದಿ ಹರಿದಾಡಿದೆ. ಜೂನ್ 4 ಫಲಿತಾಂಶ ದಿನಕ್ಕೆ ಕ್ಷಣಗಣನೆ ಶುರುವಾಗಿದ್ದು, ಆ ದಿನ ಎಲ್ಲಾ ಕುತೂಹಲಕ್ಕೆ ತೆರೆ ಬೀಳಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಜ್ವಲ್ ಕೇಸ್ ನಲ್ಲಿ ರೇವಣ್ಣ ಒದ್ದಾಟ, ಫ್ಯಾಮಿಲಿ ಜೊತೆ ಕುಮಾರಸ್ವಾಮಿ ರೆಸಾರ್ಟ್ ನಲ್ಲಿ ಸುತ್ತಾಟ