Select Your Language

Notifications

webdunia
webdunia
webdunia
webdunia

ನಿಮ್ಮ ಬೈಕ್ ಹೀಗೆ ಸೌಂಡ್ ಮಾಡಿದ್ರೆ ಹುಷಾರ್ ಎಂದ ಪೊಲೀಸ್ರು

ನಿಮ್ಮ ಬೈಕ್ ಹೀಗೆ ಸೌಂಡ್ ಮಾಡಿದ್ರೆ ಹುಷಾರ್ ಎಂದ ಪೊಲೀಸ್ರು
ಧಾರವಾಡ , ಶನಿವಾರ, 28 ಡಿಸೆಂಬರ್ 2019 (21:55 IST)
ಕರ್ಕಶವಾಗಿ ಶಬ್ದ ಹೊರಡಿಸೋ ಬೈಕ್ ಗಳ ಮೇಲೆ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ.
 

ಹುಬ್ಬಳ್ಳಿ - ಧಾರವಾಡ ಮಹಾನಗರದಲ್ಲಿ ಕರ್ಕಶ ಶಬ್ದ ಮಾಡುವ ಮೂಲಕ ಶಬ್ದ ಮಾಲಿನ್ಯವನ್ನು ಸೃಷ್ಟಿಸುವ ಬೈಕ್ ಗಳಿಗೆ ನಿಯಂತ್ರಣ ಹೇರುವ ಸದುದ್ದೇಶದಿಂದ ಹು-ಧಾ ಮಹಾನಗರ ಪೊಲೀಸ್ ಆಯುಕ್ತರ ನಿರ್ದೇಶನದಲ್ಲಿ ಪೊಲೀಸ್  ಕಾರ್ಯಾಚರಣೆ ಮಾಡುವ ಮೂಲಕ ಬೈಕ್ ಸವಾರರಿಗೆ ಪೊಲೀಸ್ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.

ಡಿ.22ರಿಂದ 27ರ ವರೆಗೆ ಪೊಲೀಸ್ ಆಯುಕ್ತರಾದ ಆರ್ ದೀಲಿಪ್, ಕಾನೂನು ಸುವ್ಯವಸ್ಥೆ ಡಿಸಿಪಿ ಡಿ.ಎಲ್.ನಾಗೇಶ,‌ಸಹಾಯಕ ಪೊಲೀಸ್ ಆಯುಕ್ತ ಎಸ್.ಎಂ.ಸಂದಿಗವಾಡ ನೇತೃತ್ವದಲ್ಲಿ ಹು-ಧಾ ಮಹಾನಗರದಲ್ಲಿ ಕರ್ಕಶ ಶಬ್ದ ಮಾಡುವ ಬೈಕ್ ಸೈಲೆನ್ಸರಗಳನ್ನು ವಶಕ್ಕೆ ಪಡೆಯುವ ಮೂಲಕ ಬೈಕ್ ಸವಾರರಿಗೆ ಬಿಸಿ ಮುಟ್ಟಿಸಿದ್ದಾರೆ.

ಒಟ್ಟು 140 ಸೈಲೆನ್ಸರ್ ವಶಕ್ಕೆ ಪಡೆದ ಅಧಿಕಾರಿಗಳು ಒಂದೇ ವಾರದಲ್ಲಿ  14 ಸೈಲೆನ್ಸರ್ ವಶಪಡಿಸಿಕೊಂಡಿದ್ದು, ಎಂ.ವ್ಹಿ ಕಾಯ್ದೆ ಅಡಿಯಲ್ಲಿ ಕಾರ್ಯಾಚರಣೆ ಕೈಗೊಂಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಬದುಕಿರೋ ಪೇಜಾವರ ಶ್ರೀಗೆ ಶ್ರದ್ಧಾಂಜಲಿ - ವಿವಾದಕ್ಕೆ ಒಳಗಾದ ಶಾಸಕ