Publish Date: Sat, 16 Nov 2019 (17:00 IST)
Updated Date: Sat, 16 Nov 2019 (17:01 IST)
ವಿದ್ಯಾರ್ಥಿಯೊಬ್ಬ ಕಾಲೇಜಿನ ವಾಶ್ ರೂಮಿನಲ್ಲಿ ಬೆಂಕಿಹಚ್ಚಿಕೊಂಡಿರೋ ಮನಕಲುಕುವ ಘಟನೆ ನಡೆದಿದೆ.
ಕಾಲೇಜ್ ಗೆ ಬೈಕ್ ತೆಗೆದುಕೊಂಡು ಹೋಗುತ್ತೇನೆ ಅಂತ ಪಿಯು ವಿದ್ಯಾರ್ಥಿಯಾಗಿರೋ ಶಿವಂ ಮನೆಯಲ್ಲಿ ಹಠ ಹಿಡಿದಿದ್ದ. ಆದರೆ 18 ವರ್ಷದ ಆಗಿರದ ಕಾರಣ ಶಿವಂ ತಂದೆ ಬೈಕ್ ತೆಗೆದುಕೊಂಡು ಹೋಗೋದಕ್ಕೆ ಬೇಡ ಅಂದಿದ್ದರು.
ಇದರಿಂದ ಮನನೊಂದ ಶಿವಂ, ಶಾಲೆಯ ವಾಶ್ ರೂಂನಲ್ಲಿ ಬೆಂಕಿ ಹಚ್ಚಿಕೊಂಡಿದ್ದಾನೆ. ಆತನನ್ನು ಶಾಲಾ ಆಡಳಿತಯವರು ಆಸ್ಪತ್ರೆಗೆ ದಾಖಲು ಮಾಡಿದ್ದು, ಸ್ಥಿತಿ ಚಿಂತಾಜನಕವಾಗಿದೆ. ಈ ಘಟನೆ ಮುಂಬೈನ ಸುಧಾಗಡ್ ಎಂಬಲ್ಲಿ ನಡೆದಿದೆ.