Publish Date: Wed, 29 Jan 2025 (15:29 IST)
Updated Date: Wed, 29 Jan 2025 (15:33 IST)
ಪ್ರಯಾಗ್‍ರಾಜ್/ಮೈಸೂರು: ಮಹಾಕುಂಭಮೇಳದಲ್ಲಿ ಇಂದು ಮುಂಜಾನೆ ಕಾಲ್ತುಳಿತ ಪ್ರಕರಣ ಬೆನ್ನಲ್ಲೇ ಕುಂಭಮೇಳಕ್ಕೆ ಹೋಗಿ ವಾಪಸ್ ಬರುವಾಗ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಮೈಸೂರಿನ ಇಬ್ಬರು ಯುವಕರು ಮೃತಪಟ್ಟ ಘಟನೆ ಮಿರ್ಜಾಪುರದ ಬಳಿ ನಡೆದಿದೆ.
ಮೃತರನ್ನು ರಾಮಕೃಷ್ಣ ಶರ್ಮ ಹಾಗೂ ಅರುಣ್ ಶಾಸ್ತ್ರಿ ಎಂದು ಗುರುತಿಸಲಾಗಿದೆ.
ಪ್ರಯಾಗ್‍ರಾಜ್ ಮುಗಿಸಿಕೊಂಡು ಕಾಶಿಗೆ ಬರುವಾಗ ಮಿರ್ಜಾಪುರದ ಬಳಿ ಬರುವಾಗ ಲಾರಿ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿದೆ. ತಲೆಗೆ ತೀವ್ರವಾದ ಪೆಟ್ಟು ಬಿದ್ದಿದ್ದ ಇಬ್ಬರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರೂ ಸಾವಿಗೀಡಾಗಿದ್ದಾರೆ.
ರಾಮಕೃಷ್ಣ ಅವರು ಕೆಆರ್‍ಎಸ್ ಹಿನ್ನೀರಿನ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ಸಹಾಯಕ ಅರ್ಚಕರಾಗಿದ್ದರು.