Select Your Language

Notifications

webdunia
webdunia
webdunia
Wednesday, 5 March 2025
webdunia

ಹಜ್ ಯಾತ್ರೆಗೆ ನಮಗೆ ದುಡ್ಡೇ ಕೊಡ್ತಿಲ್ಲಾರೀ.. ಜಮೀರ್ ಅಹ್ಮದ್ ಸ್ಪಷ್ಟನೆ

Zameer Ahmed Khan

Krishnaveni K

ಬೆಂಗಳೂರು , ಬುಧವಾರ, 29 ಜನವರಿ 2025 (15:08 IST)
ಬೆಂಗಳೂರು: ಹಜ್ ಯಾತ್ರೆಗೆ ನಮಗೆ ಯಾವ ಸರ್ಕಾರನೂ ಸಬ್ಸಿಡಿ ಕೊಡಲ್ಲ. ಸಿಟಿ ರವಿ ಅವರು ತಿಳ್ಕೊಂಡು ಮಾತನಾಡಲಿ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.

ಬಿಜೆಪಿ ಎಂಎಲ್ ಸಿ ಸಿಟಿ ರವಿಯವರು, ಹಜ್ ಯಾತ್ರೆ ಮಾಡುವವರಿಗೆ ಸರ್ಕಾರ ನೀಡುವ ಸಬ್ಸಿಡಿ ಕಡಿತ ಮಾಡಲಿ ಎಂದು ಆಗ್ರಹಿಸಿದ್ದರು. ಇದರ ಬಗ್ಗೆ ಇಂದು ಮಾಧ್ಯಮಗಳು ಸಚಿವ ಜಮೀರ್ ಅಹ್ಮದ್ ಅವರ ಪ್ರತಿಕ್ರಿಯೆ ಕೇಳಿದ್ದಾರೆ. ಈ ಬಗ್ಗೆ ಅವರು ಮಾತನಾಡಿದ್ದಾರೆ.

‘ಕೇಂದ್ರ ಸರ್ಕಾರ ಆಗಲೀ, ರಾಜ್ಯ ಸರ್ಕಾರ ಆಗಲೀ ಹಜ್ ಯಾತ್ರೆಗೆ ಸಬ್ಸಿಡಿ ನೀಡಿಲ್ಲ. ಸಿಟಿ ರವಿಯವರು ಮಂತ್ರಿಯಾಗಿದ್ದವರು. ಮಾತನಾಡುವ ಮೊದಲು ತಿಳ್ಕೊಂಡು ಮಾತನಾಡಲಿ. ಸುಮ್ನೇ ಅಲ್ಪ ಸಂಖ್ಯಾತರ ವಿಚಾರ ಎಂದ ತಕ್ಷಣ ಮಾತನಾಡುವುದಲ್ಲ’ ಎಂದು ಜಮೀರ್ ಅಹ್ಮದ್ ಹೇಳಿದ್ದಾರೆ.

‘ಕೇಂದ್ರ ಸರ್ಕಾರದವರು ನಮಗೆ ಪ್ರತಿ ವರ್ಷಕ್ಕೆ ಇಷ್ಟು ಜನರು ಅಂತ ಟಾರ್ಗೆಟ್ ಕೊಡ್ತಾರೆ. ಕಳೆದ ವರ್ಷ 12 ಸಾವಿರ ಮಂದಿಗೆ ಟಾರ್ಗೆಟ್ ಕೊಟ್ಟಿದ್ದರು. ಈ ವರ್ಷ 10 ಸಾವಿರ ಜನರಿಗೆ ಕೊಟ್ಟಿದ್ದಾರೆ. ಯಾವ ರಾಜ್ಯದವರಿಗೂ ಸಬ್ಸಿಡಿ ಕೊಡಲ್ಲ. ಬೇಕಿದ್ರೆ ಪ್ರಧಾನಿ ನರೇಂದ್ರ ಮೋದಿಯವರನ್ನು ಕೇಳಿ ತಿಳ್ಕೊಳ್ಳಲಿ. ಕೇಂದ್ರ, ರಾಜ್ಯ ಸರ್ಕಾರದವರು ಹಜ್ ಯಾತ್ರೆ ಮಾಡುವವರಿಗೆ ಒಂದು ಕಡೆ ಕ್ಯಾಂಪ್ ಹಾಕಿ ಕೂರಿಸಿ ಅಲ್ಲಿಂದ ಇಮಿಗ್ರೇಷನ್, ವೀಸಾ ಇತ್ಯಾದಿ ಕಾನೂನು ಪ್ರಕ್ರಿಯೆ ಮಾಡಿಕೊಡುತ್ತದೆ ಅಷ್ಟೇ. ದುಡ್ಡು-ಗಿಡ್ಡು ಏನೂ ಕೊಡಲ್ಲ’ ಎಂದು ಜಮೀರ್ ಅಹ್ಮದ್ ಸ್ಪಷ್ಟನೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಂಗಾನದಿ ಸ್ನಾನದಿಂದ ಪಾಪ, ಪುಣ್ಯ ಪರಿಹಾರ ಎಲ್ಲಾ ಗೊತ್ತಿಲ್ಲ, ನಾವು ಬಸವಣ್ಣನ ಅನುಯಾಯಿಗಳು ಎಂದ ಸಿದ್ದರಾಮಯ್ಯ