ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಇಂದು ಅಪಘಾತಕ್ಕೀಡಾಗಿರುವ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಧರ್ಮಸ್ಥಳ ಆಣೆ ಪ್ರಮಾಣದ ಹೇಳಿಕೆ ಬಗ್ಗೆ ಉಲ್ಲೇಖಿಸುತ್ತಿದ್ದಾರೆ.
ಬೆಳಗಾವಿ ಅಧಿವೇಶನದ ವೇಳೆ ಸಿಟಿ ರವಿ ತಮ್ಮ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದರು ಲಕ್ಷ್ಮೀ ಹೆಬ್ಬಾಳ್ಕರ್ ಆರೋಪಿಸಿದ್ದರು. ಇದನ್ನು ಸಾಬೀತುಪಡಿಸುವಂತಹ ವಿಡಿಯೋಗಳನ್ನೂ ಹರಿಯಬಿಟ್ಟಿದ್ದರು. ಪ್ರಕರಣ ಭಾರೀ ಸುದ್ದಿಯಾಗಿತ್ತು.
ಇನ್ನೊಂದು ಕಡೆ ಸಿಟಿ ರವಿ ನಾನು ಆ ಪದ ಬಳಸಿಲ್ಲ ಎಂದು ಅಲ್ಲಗಳೆದಿದ್ದರು. ಹೀಗಾಗಿ ಸಂದರ್ಶನವೊಂದರಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹಾಗೆ ಹೇಳಿಲ್ಲವೆಂದರೆ ಧರ್ಮಸ್ಥಳದಲ್ಲಿ ಬಂದು ಆಣೆ ಮಾಡಿ ಹೇಳಲಿ ಎಂದು ಸವಾಲು ಹಾಕಿದ್ದರು.
ಈ ಸಂದರ್ಭದಲ್ಲಿ ಕೆಲವರು ರಾಜಕೀಯ ವಿಚಾರಕ್ಕೆ ಧರ್ಮಸ್ಥಳ ಅಣ್ಣಪ್ಪ ಸ್ವಾಮಿಯನ್ನು ಎಳೆದು ತರಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಖಾಸಗಿ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ತಿಳಿದೂ ತಿಳಿದೂ ತಪ್ಪು ಮಾಡಿದ್ರೆ ಅಣ್ಣಪ್ಪ ಭೂತ ಶಿಕ್ಷೆ ಕೊಡುತ್ತಾನೆ ಎಂದಿದ್ದರು.