Publish Date: Tue, 26 Oct 2021 (14:32 IST)
Updated Date: Tue, 26 Oct 2021 (14:35 IST)
ಅಕ್ರಮ ಆಸ್ತಿ ಗಳಿಕೆ ಆರೋಪದಡಿಯಲ್ಲಿ ಕಾರ್ಮಿಕ ಇಲಾಖೆ ಉಪ ಆಯುಕ್ತ ಎ.ಎಚ್.ಉಮೇಶ್ ಮನೆಯ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೆಂಗಳೂರು, ಅಧಿಕಾರಿಯ ಹೂಟ್ಟೂರಾದ ರಾಮನಗರ ಮತ್ತು ಅವರ ಅಪ್ತರ ಮನೆ ಮೇಲೂ ದಾಳಿ ನಡೆದಿದೆ. ಉಮೇಶ್ ಪ್ರಸ್ತುತ ಯಶವಂತಪುರ ಉಪ ವಿಭಾಗದ ಉಪ ಆಯುಕ್ತರಾಗಿದ್ದಾರೆ.
ತನ್ನ ಕುಟುಂಬಸ್ಥರ ಹೆಸರಲ್ಲಿ ಬೇನಾಮಿ ಆಸ್ತಿ ಮಾಡಿರುವ ಉಮೇಶ್ ಅವರ ಮೇಲೆ ರವಿ ಕುಮಾರ್ ಕಂಚನಹಳ್ಳಿ ಎಂಬುವವರ ದೂರಿನ ಆಧಾರವಾಗಿ ಎಫ್‌ಐಆರ್ ದಾಖಲಾಗಿತ್ತು.