Select Your Language

Notifications

webdunia
webdunia
webdunia
webdunia

ಕೇಂದ್ರದಿಂದ ರಾಜಭವನ ದುರ್ಬಳಕೆ, ಅಬ್ರಾಹಂ ಒಬ್ಬ ಬ್ಲಾಕ್‌ಮೇಲರ್‌: ಸಿದ್ದರಾಮಯ್ಯ ಆರೋಪ

Chief Minister Siddaramaiah

Sampriya

ಮೈಸೂರು , ಶುಕ್ರವಾರ, 2 ಆಗಸ್ಟ್ 2024 (14:09 IST)
ಮೈಸೂರು: ಕೇಂದ್ರ ಸರ್ಕಾರವು ರಾಜಭವನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ರಾಜ್ಯದ ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.

ರಾಜ್ಯಪಾಲರು ಕೇಂದ್ರ ಸರ್ಕಾರ ಹಾಗೂ ಬಿಜೆಪಿ, ಜೆಡಿಎಸ್‌ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು.

ರಾಜ್ಯಪಾಲರು ನೋಟಿಸ್ ಜಾರಿಗೊಳಿಸಿರುವುದಕ್ಕೆ ಸಂಬಂಧಿಸಿದಂತೆ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿದ್ದಾರೆ. ಕೆಟ್ಟ ಸಂಪ್ರದಾಯ ಆಗಬಾರದೆಂದು ನಾನು ಸಚಿವ ಸಂಪುಟ ಸಭೆಗೆ ಹೋಗಿರಲಿಲ್ಲ. ಸಭೆ ನಡೆಸುವಂತೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ಗೆ ಹೇಳಿದ್ದೆ. ನೋಟಿಸ್ ಕೊಟ್ಟಿರುವುದು ಕಾನೂನು ಬಾಹಿರವಾಗಿದ್ದು, ಅದನ್ನು ವಾಪಸ್ ಪಡೆದುಕೊಳ್ಳಬೇಕು ಎಂದು ಸಭೆ ಸಲಹೆ ನೀಡಿದೆ ಎಂದು ತಿಳಿಸಿದರು.

ಟಿ.ಕೆ. ಅಬ್ರಾಹಂ ಒಬ್ಬ ಬ್ಲಾಕ್‌ಮೇಲರ್‌. ಅವನ ದೂರಿನ ಮೇರೆಗೆ ಕ್ರಮ ವಹಿಸಿರುವುದು ಕಾನೂನು ಬಾಹಿರವಾಗಿದೆ. ಜುಲೈ 26ರಂದು ಬೆಳಿಗ್ಗೆ 11.30ಕ್ಕೆ ದೂರು ಕೊಟ್ಟಿದ್ದಾನೆ. ಅಂದೇ ಕಾರಣ ಕೇಳಿ ನೋಟಿಸ್‌ ನೀಡಲಾಗಿದೆ. ರಾಜ್ಯಪಾಲರ ವಿಶೇಷಾಧಿಕಾರಿ ಪ್ರಭುಶಂಕರ್‌ ರಾತ್ರಿ 10ಕ್ಕೆ ಫೋನ್ ಮಾಡಿ ನೋಟಿಸ್ ಸಿದ್ಧವಿದೆ ತೆಗೆದುಕೊಳ್ಳಬೇಕು ಎಂದು ಅತೀಕ್‌ ಅವರಿಗೆ ಹೇಳಿದ್ದಾರೆ. ಈಗ ರಾತ್ರಿ ಆಗಿರುವುದರಿಂದ ತೆಗೆದುಕೊಳ್ಳಲಾಗುವುದಿಲ್ಲ ಎಂದು ನಮ್ಮ ಅಧಿಕಾರಿ ತಿಳಿಸಿದ್ದಕ್ಕೆ, ಮರು ದಿನ ಕೊಟ್ಟಿದ್ದಾರೆ ಎಂದು ಹೇಳಿದರು.

ನಾನೊಬ್ಬ ಚುನಾಯಿತ ಸರ್ಕಾರದ ಮುಖ್ಯಮಂತ್ರಿ. ನನಗೆ ನೋಟಿಸ್ ಕೊಡುವಾಗ ಕಾನೂನನ್ನು ಸಮರ್ಪಕವಾಗಿ ನೋಡಬೇಕಿತ್ತು. ಆದರೆ, ರಾಜ್ಯಪಾಲರು ಆತುರ ಮಾಡಿದ್ದಾರೆ ಎಂದು ಆರೋಪಿಸಿದರು.

 

Share this Story:

Follow Webdunia kannada

ಮುಂದಿನ ಸುದ್ದಿ

ವಯನಾಡಿನಲ್ಲಿ ಸಂತ್ರಸ್ತರನ್ನು ನೋಡಿ ರಾಹುಲ್ ಗಾಂಧಿಗೆ ತಂದೆಯ ಸಾವಿನ ನೆನಪು: ಇಂದೂ ವಯನಾಡಿನಲ್ಲೇ ಅಕ್ಕ-ತಮ್ಮ ಮೊಕ್ಕಾಂ