Select Your Language

Notifications

webdunia
webdunia
webdunia
webdunia

ದರ್ಶನ್ ಆಂಡ್ ಗ್ಯಾಂಗ್ ರೇಣುಕಾಸ್ವಾಮಿ ಜೀವ ಮುಗಿಸಲು ಬಳಸಿದ್ದು ಜಸ್ಟ್ 699 ವಸ್ತು

Renukaswamy

Krishnaveni K

ಬೆಂಗಳೂರು , ಶುಕ್ರವಾರ, 2 ಆಗಸ್ಟ್ 2024 (10:59 IST)
ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ದರ್ಶನ್ ಆಂಡ್ ಗ್ಯಾಂಗ್ ಕೃತ್ಯಗಳ ಬಗ್ಗೆ ಒಂದೊಂದೇ ವಿಚಾರಗಳು ಹೊರಗೆ ಬರುತ್ತಲೇ ಇವೆ. ರೇಣುಕಾಸ್ವಾಮಿ ಹತ್ಯೆಗೆ ಬಳಸಿದ್ದ ವಸ್ತುವಿನ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರವೊಂದು ಹೊರಬಿದ್ದಿದೆ.

ನಟಿಪವಿತ್ರಾ ಗೌಡ, ದರ್ಶನ್ ಮತ್ತು ಸಹಚರರು ರೇಣುಕಾಸ್ವಾಮಿಗೆ ಪಟ್ಟಣಗೆರೆ ಶೆಡ್ ನಲ್ಲಿ ಚಿತ್ರ ಹಿಂಸೆ ನೀಡಿ ಕೊಲೆ ಮಾಡಿದ್ದಾರೆ ಎಂಬುದು ಆರೋಪವಾಗಿದೆ. ಕೈಗೆ ಸಿಕ್ಕ ವಸ್ತುಗಳಿಂದ ಹಲ್ಲೆ ನಡೆಸಿದ್ದಲ್ಲದೆ, ಶಾಕ್ ಟ್ರೀಟ್ ಮೆಂಟ್ ಕೂಡಾ ಕೊಟ್ಟಿದ್ದರು ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.

ರೇಣುಕಾಸ್ವಾಮಿ ಹತ್ಯೆಗೆ ಜಸ್ಟ್ 699 ರೂಪಾಯಿಗಳ ವಸ್ತು ಬಳಸಲಾಗಿತ್ತು ಎಂಬ ಅಂಶ ಬಯಲಾಗಿದೆ. ಈ ವಸ್ತುವನ್ನು ಆನ್ ಲೈನ್ ನಲ್ಲಿ ಡೆಲಿವರಿ ಮಾಡಲಾಗಿತ್ತು. ಹೀಗಾಗಿ ಡೆಲಿವರಿ ಬಾಯ್ ಕೂಡಾ ಈಗ ಸಾಕ್ಷಿಯಾಗಿದ್ದಾನೆ. ಎಲೆಕ್ಟ್ರಿಕಲ್ ಶಾಕ್ ನೀಡಲು ಮೆಗ್ಗರ್ ಮೆಷಿನ್ ನನ್ನು 699 ರೂ. ಕೊಟ್ಟು ಆನ್ ಲೈನ್ ನಲ್ಲಿ ತರಿಸಿಕೊಳ್ಳಲಾಗಿತ್ತು.

ಹಲ್ಲೆಯಿಂದ ಸುಸ್ತಾಗಿ ಬಿದ್ದಿದ್ದ ರೇಣುಕಾಸ್ವಾಮಿ ಮೇಲೆ ಇದೇ ಮೆಗ್ಗರ್ ಮೆಷಿನ್ ಬಳಸಿ ಇಲೆಕ್ಟ್ರಿಕ್ ಶಾಕ್ ನೀಡಲಾಗಿತ್ತು. ಈ ಶಾಕ್ ತಡೆಯಲಾಗದೇ ಆತ ಸಾವನ್ನಪ್ಪಿದ್ದ. ಹೀಗಾಗಿ ರೇಣುಕಾಸ್ವಾಮಿ 699 ರೂ.ಗಳ ಈ ವಸ್ತುವಿನಿಂದ ಜೀವ ಕಳೆದುಕೊಳ್ಳಬೇಕಾಯಿತು ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತರುಣ್ ಸುಧೀರ್, ಸೋನಲ್ ಮದುವೆಗೆ ಧರ್ಮ ಅಡ್ಡಬರುತ್ತಾ, ಯಾವ ಥರಾ ನಡೆಯಲಿದೆ ಮದುವೆ