Select Your Language

Notifications

webdunia
webdunia
webdunia
webdunia

ಅಭಿಮನ್ಯುವೇ ಅಂಬಾರಿ ಹೊರಲಿದ್ದಾನೆ

ಅರಣ್ಯ ಸಚಿವ ಈಶ್ವರ ಖಂಡ್ರೆ
bangalore , ಶನಿವಾರ, 2 ಸೆಪ್ಟಂಬರ್ 2023 (15:00 IST)
ಈ ಬಾರಿಯೂ ಅಭಿಮನ್ಯುವೇ ಅಂಬಾರಿ ಹೊರಲಿದ್ದಾನೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಘೋಷಿಸಿದ್ದಾರೆ.. ಮೈಸೂರಿನಲ್ಲಿ ಮಾಹಿತಿ ನೀಡಿದ ಅವರು, ಗಜಪಯಣಕ್ಕೆ ವಿದ್ಯುಕ್ತವಾಗಿ ಚಾಲನೆ ಕೊಟ್ಟಿದ್ದೇವೆ. ಐತಿಹಾಸಿಕ ದಸರಾ ಪ್ರಾರಂಭವಾಗಿದೆ. ಒಂದೂವರೆ ತಿಂಗಳು ದಸರಾ ಗಜಪಡೆಗಳು ತಾಲೀಮಿನಲ್ಲಿ ಭಾಗಿಯಾಗುತ್ತವೆ ಎಂದು ತಿಳಿಸಿದ್ರು.. ಐತಿಹಾಸಿಕ ದಸರಾ ಪ್ರಾರಂಭವಾಗಿದೆ. ಕಾಡಿನಿಂದ ನಾಡಿಗೆ ಆನೆಗಳು ತೆರಳುತ್ತವೆ. ಅಂಜನ್ ಎಂಬ ಆನೆ ಈ ಬಾರಿ ದಸರಾಗೆ ಹೊಸದಾಗಿ ಸೇರ್ಪಡೆಯಾಗಿದೆ. ನಿಶಾನೆ ಎಂಬ ಆನೆಯನ್ನ ದಸರಾದಲ್ಲಿ ಬಳಸಿಕೊಳ್ಳಲು ಇನ್ನೂ ನಿರ್ಧಾರ ಮಾಡಿಲ್ಲ.. ನಾಡ ಅಧಿದೇವತೆ ಚಾಮುಂಡಿ ತಾಯಿಯ ಆಶೀರ್ವಾದ ಎಲ್ಲರ ಮೇಲೆ ಇರಲಿ ಎಂದು ಹಾರೈಸಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಯಶಸ್ಸು ಸಿಗಲಿ ಎಂದು ನಾನು ಶುಭ ಹಾರೈಸುತ್ತೇನೆ-ಡಿಕೆಶಿ