Select Your Language

Notifications

webdunia
webdunia
webdunia
webdunia

100 ಅಡಿಗೆ ಇಳಿದ KRS ಡ್ಯಾಂನ ನೀರಿನ ಮಟ್ಟ

100 ಅಡಿಗೆ ಇಳಿದ KRS ಡ್ಯಾಂನ ನೀರಿನ ಮಟ್ಟ
mysooru , ಶನಿವಾರ, 2 ಸೆಪ್ಟಂಬರ್ 2023 (13:00 IST)
KRS ಡ್ಯಾಂನಿಂದ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಹಿನ್ನೆಲೆ KRS ಡ್ಯಾಂ ನೀರಿನ ಮಟ್ಟ 100 ಅಡಿಗೆ ಕುಸಿದಿದೆ.ದಿನೇದಿನೆ ಜಲಾಶಯದ ನೀರಿನ ಮಟ್ಟ ಕುಸಿತವಾಗ್ತಿದ್ದು, ಅನ್ನದಾತರು ಕಂಗಾಲಾಗಿದ್ದಾರೆ. ತಮಿಳುನಾಡಿಗೆ ನೀರು ಹರಿಸಿದ ಬಳಿಕ 113 ಅಡಿಗಳಷ್ಟಿದ್ದ ನೀರು 100 ಅಡಿಗೆ ಇಳಿದಿದೆ. ಪ್ರತಿನಿತ್ಯ ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್​ ನೀರು ಹರಿಸಲಾಗ್ತಿದೆ.. ಜಲಾಶಯದಲ್ಲಿ 100 ಅಡಿಗೂ ಕಡಿಮೆ ನೀರಿದ್ದರೂ ಸಹ ಸರ್ಕಾರ ನೀರು ಹರಿಸುವುದನ್ನು ನಿಲ್ಲಿಸಿಲ್ಲ. ಜಲಾಶಯದಲ್ಲಿ ನೀರಿನ ಮಟ್ಟ ಕುಸಿತವಾಗುತ್ತಿರುವುದರಿಂದ ಮುಂದಿನ ಕೆಲ ದಿನಗಳಲ್ಲಿ ನೀರಿಗೆ ತತ್ವಾರ ಶುರುವಾಗಲಿದೆ. ಕುಡಿಯಲು ಕಾವೇರಿ ನೀರನ್ನೇ ನಂಬಿರುವ ಸಿಲಿಕಾನ್​ ಸಿಟಿ ಮಂದಿಗೆ ಕೂಡ ಜಲ ಕಂಟಕ ಎದುರಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನಿಂದ ಟೋಲ್ ದರ ಏರಿಕೆ : ದರದಲ್ಲಿ ಯಾಕಿಷ್ಟು ಏರಿಳಿತ?