ಮೆಡಿಕಲ್ ಕಾಲೇಜು ಕನಕಪುರಕ್ಕೆ ಶಿಫ್ಟ್ ಮಾಡುವ ವಿಚಾರವಾಗಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಅವರೇ ಮಾಡಿಕೊಟ್ಟದ್ದು.ನಮಗೂ ಸ್ವಾರ್ಥ ಇದೆ.ನಮ್ಮ ಕ್ಷೇತ್ರದಲ್ಲೂ ಮೆಡಿಕಲ್ ಕಾಲೇಜು ಇರಬೇಕು ಅಂತ.ರಾಮನಗರ ಜಿಲ್ಲೆಯ ಮೂರು ಕಿ.ಮೀ ದೂರದಲ್ಲೇ ಆಸ್ಪತ್ರೆ ಇರೋದು.ಕನಕಪುರ ಬಾರ್ಡರ್ ವರೆಗೂ ಅದು ಅನ್ವಯ ಆಗಲಿದೆ.ಡಿಸ್ಟ್ರಿಕ್ಟ್ ಆಸ್ಪತ್ರೆ ಆಗಲಿ ಅನ್ನೋದು ನಮ್ಮ ಆಸೆ.ಇತ್ತೀಚೆಗೆ ಅದು ಉದ್ಘಾಟನೆ ಕೂಡ ನಡೆದಿದೆ.ಹಿಂದೆ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಬದಲಾವಣೆ ಮಾಡಿದ್ದಾರೆ.
ರಾಮನಗರಕ್ಕೆ ಬರಬೇಕಿದ್ದ ಕಾಲೇಜು ಚಿಕ್ಕಬಳ್ಳಾಪುರಕ್ಕೆ ತೆಗೆದುಕೊಂಡು ಹೋಗಿದ್ದಾರೆ.ನಿಯೋಗ ಯಡಿಯೂರಪ್ಪ ಅವರನ್ನ ಭೇಟಿ ಮಾಡಿದೆವು.ಯಡಿಯೂರಪ್ಪ ಭರವಸೆ ಕೊಟ್ಟಿದ್ರು ರೀಸ್ಟೋರ್ ಮಾಡ್ತೀನಿ ಅಂತ.ಚುನಾವಣೆ ಬಂದಾಗ ಎತ್ತಿ ಕಟ್ಟುವ ಕೆಲಸ ಆಗಿದೆ.ನನ್ನಬಳಿ ದಾಖಲೆ ಇಲ್ವಾ.?ಕುಮಾರಸ್ವಾಮಿ ಅವರೇ ಬಜೆಟ್ ಸ್ಪೀಚ್‌ನಲ್ಲಿ ಹೇಳಿದ್ರು.ಕನಕಪುರಕ್ಕೆ ಮೆಡಿಕಲ್ ಕಾಲೇಜು ಸ್ಯಾಂಗಷನ್ ಮಾಡಲಾಗಿದೆ ಅಂತ.ಅವರು ಸಿಎಂ ಹೇಗೆ ಸುಮ್ಮನೆ ಆಗಿಬಿಟ್ರಾ.?ನಮ್ಮ ಶಾಸಕರು ಬೆಂಬಲ ಕೊಟ್ಟಿದ್ದಕ್ಕೆ ತಾನೆ ಅವರೂ ಸಿಎಂ ಆಗಿದ್ದು ಎಂದು ಮಾಜಿ ಸಿಎಂ ಹೆಚ್.ಡಿ.ಕೆ ವಿರುದ್ಧ ಡಿಸಿಎಂ ಡಿಕೆಶಿ ವಾಗ್ದಾಳಿ ನಡೆಸಿದ್ದಾರೆ.