Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಪಕ್ಷ ಹೃದಯದಿಂದ ವಿಚಾರ ಮಾಡುತ್ತದೆ - ಲಕ್ಷ್ಮೀ ಹೆಬ್ಬಾಳಕರ್

ಕಾಂಗ್ರೆಸ್ ಪಕ್ಷ ಹೃದಯದಿಂದ ವಿಚಾರ ಮಾಡುತ್ತದೆ - ಲಕ್ಷ್ಮೀ ಹೆಬ್ಬಾಳಕರ್
bangalore , ಭಾನುವಾರ, 27 ಆಗಸ್ಟ್ 2023 (14:37 IST)
ಕಾಂಗ್ರೆಸ್ ಪಕ್ಷ ಯಾವತ್ತೂ ಹೃದಯದಿಂದ ವಿಚಾರ ಮಾಡುವ ಪಕ್ಷ. ಗ್ಯಾರಂಟಿ ಯೋಜನೆಗಳ ಮೂಲಕ ಎಷ್ಟೊಂದು ಪುಣ್ಯದ ಕೆಲಸ ಮಾಡುತ್ತಿದ್ದೇವೆ. ಕೇವಲ ಚುನಾವಣೆಯಲ್ಲಿ ಗೆದ್ದು ಬರಲು ನಾವು ಘೋಷಣೆಗಳನ್ನು ಮಾಡಲಿಲ್ಲ. ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸಿ, ಕೊರೊನಾ ಬಂದು ಹೋದ ಮೇಲೆ ಜನರ ಜೀವನ ಕಷ್ಟವಾಗಿದೆ ಎನ್ನುವುದನ್ನು ಅರಿತು ಇಂತಹ ಸಂದರ್ಭದಲ್ಲಿ ಏನಾದರೂ ಮಾಡಬೇಕು ಎಂದು ಗ್ಯಾರಂಟಿಗಳನ್ನು ಘೋಷಿಸಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಕರೆ ನೀಡಿದ್ದಾರೆ.

ಗೃಹಲಕ್ಷ್ಮಿ ಯೋಜನೆಯ  ಉದ್ಘಾಟನೆ ಕಾರ್ಯಕ್ರಮದ ಪೂರ್ವಸಿದ್ಧತೆ ಕುರಿತು ಶನಿವಾರ ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಸರಕಾರಕ್ಕೆ, ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯ ಹೆಸರನ್ನು ತರಬೇಕೆಂದು ಬೆಳಗಾವಿಯಿಂದ ಮೈಸೂರಿಗೆ ಬಂದು ಈ ಕಾರ್ಯಕ್ರಮದ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದೇನೆ. ನಮ್ಮ ಸರಕಾರ 5 ಗ್ಯಾರಂಟಿಗಳನ್ನು ಘೋಷಿಸಿ ಜಾರಿಗೊಳಿಸುವ ಮೂಲಕ ನುಡಿದಂತೆ ನಡೆದ ಸರಕಾರ ಎನಿಸಿದೆ, ಸಿದ್ದರಾಮಯ್ಯ ಭಾಗ್ಯಗಳ ಸರದಾರ ಎನಿಸಿಕೊಂಡಿದ್ದಾರೆ. ಡಿಕೆ.ಶಿವಕುಮಾರ ಅವರು ಅಪ್ರತಿಮ ಸಂಘಟಕ ಎನಿಸಿಕೊಂಡಿದ್ದಾರೆ. ಕಾಣುರೇ ಕೇವಲ ಚುನಾವಣೆಯಲ್ಲಿ ಗೆದ್ದು ಬರಲು ನಾವು ಘೋಷಣೆಗಳನ್ನು ಮಾಡಲಿಲ್ಲ. ಕಷ್ಟಕ್ಕೆ ಸ್ಪಂದಿಸಿ, ಕೊರೊನಾ ಬಂದು ಹೋದ ಮೇಲೆ ಜನರ ಜೀವನ ಕಷ್ಟವಾಗಿದೆ ಎನ್ನುವುದನ್ನು ಅರಿತು ಇಂತಹ ಸಂದರ್ಭದಲ್ಲಿ ಏನಾದರೂ ಮಾಡಬೇಕು ಎಂದು ಗ್ಯಾರಂಟಿಗಳನ್ನು ಘೋಷಿಸಿದ್ದೇವೆ ಎಂದು ಹೆಬ್ಬಾಳಕರ್ ಹೇಳಿದರು.
 
ಕಾಂಗ್ರೆಸ್ ಪಕ್ಷ ಹೃದಯದಿಂದ ವಿಚಾರ ಮಾಡುತ್ತದೆ. ಹಾಗಾಗಿಯೆ ಇಂದಿರಾ ಗಾಂಧಿ, ದೇವರಾಜ ಅರಸ ಅಂತವರನ್ನುರಾಜ್ ಇಂದಿಗೂ ಸ್ಮರಿಸುತ್ತೇವೆ. ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಬಸವಣ್ಣನವರ ತತ್ವದಲ್ಲಿ ವಿಶ್ವಾಸವಿಟ್ಟು ನಾವು ನಡೆಯುತ್ತಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ 100 ದಿನದಲ್ಲಿ ಇಂತಹ ಒಳ್ಳೆಯ ಬಜೆಟ್ ಕೊಟ್ಟು  ಜ್ ಯಾವುದೇ ಅಡಚಣೆ ಮಾಡದೆ ಬಹಳ ಚೆನ್ನಾಗಿ ನಿರ್ವಹಣೆ ಮಾಡಿ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣ ಮಾಡುತ್ತಿದ್ದಾರೆ ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೀಯಾಂಕ ಖರ್ಗೆ ಜೊತೆ ಪ್ರಣಾಳಿಕೆಯಲ್ಲಿ ಭರವಸೆ ಕೊಟ್ಟ ವಿಚಾರವಾಗಿ ಚರ್ಚೆ ಮಾಡಿದ್ವಿ- ಡಿಕೆಶಿ