Publish Date: Thu, 31 Aug 2023 (08:43 IST)
Updated Date: Thu, 31 Aug 2023 (10:20 IST)
ಬೆಂಗಳೂರು : ಕಾವೇರಿ ನೀರು ಬಿಡುಗಡೆ ವಿಚಾರವಾಗಿ ಚರ್ಚೆ ನಡೆಸಲು ಗುರುವಾರ ದೆಹಲಿಗೆ ಹೋಗ್ತಿದ್ದೇನೆ ಅಂತಾ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಮ್ಮ ವಕೀಲರ ಭೇಟಿಗೆ ಹೋಗುತ್ತಿದ್ದೇನೆ. ಇಲಾಖೆ ಅಧಿಕಾರಿಗಳನ್ನು ಅಧಿಕೃತವಾಗಿ ಭೇಟಿ ಮಾಡಲಿದ್ದೇನೆ. ಅವರು 24ಟಿಎಂಸಿ ನೀರು ಕೇಳಿದ್ರು. ನಾವು 3 ಸಾವಿರ ಕ್ಯೂಸೆಕ್ ನೀರು ಬಿಡೋದಾಗಿ ಹೇಳಿದ್ವಿ. 5 ಸಾವಿರ ಕ್ಯೂಸೆಕ್ ಬಿಡುವಂತೆ ಹೇಳಿದ್ದಾರೆ. ನಾಳೆ ವಾಸ್ತವಾಂಶ ಬಗ್ಗೆ ಚರ್ಚೆ ಮಾಡುವುದಾಗಿ ಹೇಳಿದರು.
ನೀರು ಬಿಡುವ ವಿಚಾರದಲ್ಲಿ ಮಾಜಿ ಸಿಎಂ ಬೊಮ್ಮಾಯಿ ಆಕ್ಷೇಪದ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ಬೊಮ್ಮಾಯಿ ಅವರು ಏನು ಬೇಕಾದ್ರೂ ಸಲಹೆ ನೀಡಲಿ. ಲೆಕ್ಕಾಚಾರದ ಬೀಗ ನಮ್ಮ ಬಳಿ ಇದೆ. ಬೇರೆ ಯಾರಿಗೂ ಬೀಗ ಕೊಟ್ಟಿಲ್ಲ. ನಮ್ಮ ರೈತರ ಕಷ್ಟಕಾಲದಲ್ಲೂ ರಕ್ಷಣೆ ಮಾಡಬೇಕು.