Select Your Language

Notifications

webdunia
webdunia
webdunia
webdunia

ಸೆಪ್ಟೆಂಬರ್ 23 & 24ರಂದು ಪಿಜಿ ಸಿಇಟಿ ಪರೀಕ್ಷೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ

ಸೆಪ್ಟೆಂಬರ್ 23 & 24ರಂದು ಪಿಜಿ ಸಿಇಟಿ ಪರೀಕ್ಷೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ
ಬೆಂಗಳೂರು , ಗುರುವಾರ, 31 ಆಗಸ್ಟ್ 2023 (08:26 IST)
ಬೆಂಗಳೂರು : ಎಂಬಿಎ, ಎಂಸಿಎ, ಎಂ.ಇ, ಎಂ.ಟೆಕ್, ಎಂ.ಆರ್ಕಿಟೆಕ್ಚರ್ ಕೋರ್ಸ್ಗಳ ಪ್ರವೇಶಕ್ಕೆ ಸೆಪ್ಟೆಂಬರ್ 23 ಮತ್ತು 24ರಂದು ಪಿಜಿ ಸಿಇಟಿ ಪರೀಕ್ಷೆ ನಡೆಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

ಸೆ.23ರ ಶನಿವಾರ ಮಧ್ಯಾಹ್ನ 2.30ರಿಂದ 4.30ರ ವರೆಗೆ ಎಂ.ಇ, ಎಂ.ಟೆಕ್ ಮತ್ತು ಎಂ.ಆರ್ಕ್ ಕೋರ್ಸ್ಗಳಿಗೆ, ಸೆ.24ರ ಭಾನುವಾರ ಬೆಳಿಗ್ಗೆ 10.30 ರಿಂದ 12.30ರ ವರೆಗೆ ಎಂಸಿಎ ಕೋರ್ಸ್ಗೆ ಮತ್ತು ಅಂದು ಮಧ್ಯಾಹ್ನ 2.30ರಿಂದ 4.30ರ ವರೆಗೆ MBA ಕೋರ್ಸ್ಗೆ ಗರಿಷ್ಠ 100 ಅಂಕಗಳಿಗೆ ಪರೀಕ್ಷೆಗಳು ನಡೆಯಲಿವೆ ಎಂದಿದ್ದಾರೆ.

ಈ ಮೊದಲು ಸೆಪ್ಟೆಂಬರ್ 9 ಮತ್ತು 10ರಂದು ಈ ಪರೀಕ್ಷೆಯನ್ನ ನಡೆಸಲು ನಿರ್ಧರಿಸಲಾಗಿತ್ತು. ಹೆಚ್ಚಿನ ಮಾಹಿತಿಗೆ ಪ್ರಾಧಿಕಾರದ ವೆಬ್ಸೈಟ್ ವೆಬ್‌ಸೈಟ್‌ http://kea.kar.nic.inನೋಡಬಹುದು ಎಂದು ಮಾಹಿತಿ ನೀಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ನೀಲಿ ಚಂದಿರನನ್ನು ಕಣ್ತುಂಬಿಕೊಂಡ ಜನರು