Select Your Language

Notifications

webdunia
webdunia
webdunia
webdunia

ಯಶಸ್ಸು ಸಿಗಲಿ ಎಂದು ನಾನು ಶುಭ ಹಾರೈಸುತ್ತೇನೆ-ಡಿಕೆಶಿ

dk shivakumar
bangalore , ಶನಿವಾರ, 2 ಸೆಪ್ಟಂಬರ್ 2023 (14:47 IST)
ಇಂದು ಇಸ್ರೋದಿಂದ ಆದಿತ್ಯ ಎಲ್ 1 ಉಡಾವಣೆ ಹಿನ್ನೆಲೆ ಡಿಸಿಎಂ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.ಕರ್ನಾಟಕದಿಂದ ಭಾರತಕ್ಕೆ ಗೌರವ ತರೋ ಕೆಲಸ ನಮ್ಮ ಇಸ್ರೋ ಮಾಡ್ತಾ ಇದ್ದಾರೆ.ದೊಡ್ಡ ಪ್ರಯೋಗ ಪ್ರಯತ್ನ ಸಾಹಸ ಎಲ್ಲಾವೂ ಕೂಡ ಮಾಡ್ತಾ ಇದ್ದಾರೆ.ಯಶಸ್ಸು ಸಿಗಲಿ ಎಂದು  ನಾನು ಶುಭ ಹಾರೈಸುತ್ತೇನೆ.ಇಡೀ ದೇಶದ ಜನ ಅವರಿಗೆ ಪ್ರಾರ್ಥನೆ ಮಾಡ್ತಾ ಇದ್ದಾರೆಇಡೀ ವಿಶ್ವದಲ್ಲೇ ನಮ್ಮ ಇಸ್ರೋ ಬಹಳ ಶ್ರಮದಿಂದ ಎಲ್ಲರೂ ಕೂಡ ಅವರ ಸಂಪೂರ್ಣವಾದ ಜ್ಞಾನಭಂಡಾರದಿಂದ ಅವರ ಅನುಭವದಿಂದ ಒಳ್ಳೆ ಕೆಲಸ ಮಾಡ್ತಿದ್ದಾರೆ ಎಂದು ಡಿಕೆಶಿವಕುಮಾರ್ ಹೇಳಿದ್ರು.
 
ಖಾಸಗಿ ಸಾರಿಗೆ ಒಕ್ಕೂಟದಿಂದ ಸೆ,11ರಂದು ಬಂದ್ಗೆ ಕರೆ ನೀಡಿದ ವಿಚಾರವಾಗಿ ಇರಬಹುದು ಪಾಪ ತೊಂದರೆಯಾಗಿರೋದು ನಿಜ.ಗೊತ್ತಿದೆ ಖಾಸಗೀಗೆ ಯಾರೂ ಹೋಗ್ತಾ ಇಲ್ಲ.ಅದಕ್ಕೆನೋ ಒಂದು ಉಪಾಯ ಕಂಡು ಹಿಡಿಯಬೇಕು.ನಾನು ಸಿಎಂ ಹತ್ತಿರ ಮಾತನಾಡುತ್ತೇನೆ.ಸಾರಿಗೆ ಸಚಿವರ ಬಳಿಯೂ ಮಾತನಾಡುತ್ತೇನೆ.ಕೆಲವು ಜಿಲ್ಲೆಗಳಲ್ಲಿ ಸರ್ಕಾರಿ ಬಸ್ಗಳೇ ಇಲ್ಲ ಖಾಸಗೀ ಬಸ್ಗಗಳೇ ,ಅದಕ್ಕೆ ಏನಾದ್ರೂ ಉಪಾಯ ಮಾಡ್ತೇವೆ.ಕೆಲವು ಶಾಸಕರ ಆಕ್ರೋಶ ವಿಚಾರಕ್ಕೆ ಯಾವು ಶಾಸಕರೂ ಇಲ್ಲ .ನಮ್ಮ ಪಕ್ಷದಲ್ಲಿ ಡಿಸಿಪ್ಲೀನ್ ಇದೆ .ಶಾಸಕರು ತಮ್ಮನೋವನ್ನ ತೊಡಿಕೊಳ್ಳಬಾರದಾ ?? ಅದ್ರಲ್ಲಿ ಏನು ತಪ್ಪಿದೆ? ಅದ್ರಲ್ಲಿ ಏನು ತಪ್ಪಿಲ್ಲ  ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಂದ್ರಯಾನ-3 ಯಶಸ್ಸು ಬೆನ್ನಲ್ಲೇ ಸೂರ್ಯಯಾನ