Select Your Language

Notifications

webdunia
webdunia
webdunia
webdunia

ಚಂದ್ರಯಾನ-3 ಯಶಸ್ಸು ಬೆನ್ನಲ್ಲೇ ಸೂರ್ಯಯಾನ

ಚಂದ್ರಯಾನ-3  ಯಶಸ್ಸು ಬೆನ್ನಲ್ಲೇ ಸೂರ್ಯಯಾನ
bangalore , ಶನಿವಾರ, 2 ಸೆಪ್ಟಂಬರ್ 2023 (13:41 IST)
ಭಾರತ ಮತ್ತೊಂದು ಸಾಧನೆ ಮಾಡಲು ಇಸ್ರೋ ಮುಂದಾಗಿದೆ. ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ದೇಶದ ಜನತೆಗೆ ಮತ್ತೊಂದು ಸಿಹಿ ಸುದ್ದಿ ನೀಡಿದೆ.ಭಾಸ್ಕರನ ಅಧ್ಯಯನ ಮಾಡುವ ಉದ್ದೇಶದಿಂದ ಇಸ್ರೋ ಆದಿತ್ಯ ಎಲ್‌-1 ನೌಕೆ ಉಡಾವಣೆ ಮಾಡಲಿದೆ. ಬೆಳಿಗ್ಗೆ 11.50ಕ್ಕೆ ಶ್ರೀಹರಿಕೋಟಾದ ಸತೀಶ್‌ ಧವನ್‌ ಉಡಾವಣಾ ಕೇಂದ್ರದಿಂದ ಉಡಾವಣೆ ಮಾಡಲಾಗುತ್ತೆ.ಸಾರ್ವಜನಿಕರು ಕೂಡ ನೇರವಾಗಿ ವೀಕ್ಷಣೆ ಮಾಡಬಹುದು. 
 
ಇಂದು ಬೆಳಿಗ್ಗೆ 11.50ಕ್ಕೆ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಿದ್ದಾರೆ.ಆದಿತ್ಯ ಎಲ್‌ -1 ಅನ್ನು ಲಾಂಚ್ ವೀವ್‌ ಗ್ಯಾಲರಿಯಿಂದ್ ನೇರವಾಗಿ ವಿಕ್ಷಿಸಲು ಇಸ್ರೋ ಸಾರ್ವಜನಿಕರಿಗೆ ಅವಕಾಶ ಇದೆ.ಇಸ್ರೋ ವೆಬ್ ಲಿಂಕ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು.
 
 ಏನಿದು ಆದಿತ್ಯ-ಎಲ್ 1 ಮಿಷನ್‌ ಏನು ?
 
ಆದಿತ್ಯ ಎಲ್‌-1 ನೌಕೆ ಭೂಮಿಯಿಂದ 1.5 ಮಿಲಿಯನ್ ಕಿಲೋಮೀಟರ್ ಅಂದ್ರೆ 15 ಲಕ್ಷ ಕಿಲೋ ಮೀಟರ್ ತೆರಳಲಿದೆ.ಈ ಮೂಲಕ ಅತಿಹೆಚ್ಚು ದೂರ ಪ್ರಯಾಣ ಮಾಡಲಿರುವ ಭಾರತದ ಮೊಟ್ಟ ಮೊದಲ ನೌಕೆ.ಮೊದಲಹೆಗ್ಗಳಿಕೆಯೂ ಆದಿತ್ಯ-ಎಲ್ 1 ಪಾತ್ರವಾಗಲಿದೆ.ಈ ಎಲ್‌-1 ಪಾಯಿಂಟ್‌ ಪ್ರದೇಶದಲ್ಲಿ ಭೂಮಿ ಕಕ್ಷೆಗಳ ಗುರುತ್ವಾಕರ್ಷಣೆ ಬಲ ಇರುವುದಿಲ್ಲ. ಭೂಕಕ್ಷೆಯನ್ನು ದಾಟಿದ ಬಳಿಕ ಇದನ್ನು ಎಲ್‌-1ನ ಹೊರಗಿರುವ ದೊಡ್ಡ ಹಾಲೋ ಆರ್ಬಿಟ್‌ಗೆ ನೌಕೆಯನ್ನು ಸೇರಿಸಲಾಗುತ್ತದೆ.ಆದಿತ್ಯ-ಎಲ್‌1 ಯೋಜನೆಯ ಅವಧಿ ಭರ್ತಿ ನಾಲ್ಕು ತಿಂಗಳು ಇರಲಿದೆ. ಅಂದರೇ 120 ರಿಂದ 125 ದಿನಗಳು ಸಮಯ ತೆಗೆದುಕೊಳ್ಳುತ್ತದೆ.ಇದು ಜನವರಿ ಮೊದಲ ವಾರದಲ್ಲಿ ನಿರೀಕ್ಷಿತ ಕಕ್ಷೆ ಅಂದರೇ ಎಲ್-1 ಗೆ ಸೇರುವ ಸಾಧ್ಯತೆ ಇದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನಿಂದ ಟೋಲ್ ದರ ಏರಿಕೆ : ದರದಲ್ಲಿ ಯಾಕಿಷ್ಟು ಏರಿಳಿತ?