Select Your Language

Notifications

webdunia
webdunia
webdunia
webdunia

ಡಿಸಿಎಂ ಡಿಕೆ ಶಿವಕುಮಾರ್ ಗೆ ಮಾಜಿ ನೀರಾವರಿ ಸಚಿವ ಗೋವಿಂದ ಕಾರಜೋಳ ತಿರುಗೇಟು

ಡಿಸಿಎಂ ಡಿಕೆ ಶಿವಕುಮಾರ್ ಗೆ ಮಾಜಿ ನೀರಾವರಿ ಸಚಿವ ಗೋವಿಂದ ಕಾರಜೋಳ ತಿರುಗೇಟು
bangalore , ಗುರುವಾರ, 31 ಆಗಸ್ಟ್ 2023 (14:41 IST)
ನಮ್ಮ ಕಾಲದಲ್ಲಿ ತಮಿಳುನಾಡಿಗೆ ಬಿಟ್ಟ ನೀರಿನ ದಾಖಲೆ ಬಿಡುಗಡೆ ಮಾಡಲಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಗೆ ಮಾಜಿ ನೀರಾವರಿ ಸಚಿವ ಗೋವಿಂದ ಕಾರಜೋಳ ತಿರುಗೇಟು ನೀಡಿದ್ದಾರೆ.ನಮ್ಮ ಕಾಲದಲ್ಲಿ ರೈತರಿಗೆ ನೀರು ಇಟ್ಟುಕೊಂಡೇ ತಮಿಳುನಾಡಿಗೆ ನೀರು ಬಿಟ್ಟಿದ್ದೇವೆ.ನಾವು ಅಧಿಕಾರದಲ್ಲಿದ್ದಾಗ ರೈತರು ಏನು ಪ್ರತಿಭಟನೆ ಮಾಡಿದ್ರಾ..?ಸುಮ್ಮನೆ ರಾಜಕೀಯಕ್ಕಾಗಿ ಏನೋ ಮಾತಾಡೋದು ಸರಿಯಲ್ಲ.ಡಿಕೆ ಶಿವಕುಮಾರ್ ಅದೇನೋ ಬಿಚ್ಚಿಡ್ತಾರೋ ಬಿಚ್ಚಿಡಲಿ.ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ, ರೈತರ ಬಗ್ಗೆ,‌ಅಭಿವೃದ್ದಿ‌ ಬಗ್ಗೆ ಗಮನ‌ ಕೊಡ್ತಿಲ್ಲ.ಕೇವಲ ವೋಟ್ ಬ್ಯಾಂಕ್ ರಾಜಕಾರಣ ಮಾಡಿಕೊಂಡು ಬರ್ತಿದೆ.ಮುಂಗಾರು ಮಳೆ ಕೊರತೆಯಾದಾಗಲೇ‌ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು.ತಮಿಳುನಾಡಿಗೆ ಎಷ್ಟು‌ ನೀರು ಬಿಡಬೇಕು ಎಂದು‌ ಎಚ್ಚೆತ್ತುಕೊಳ್ಳಬೇಕಿತ್ತು.ಸಿಡಬ್ಲು ಎಂ ಎ ಮತ್ತು ಸಿಡಬ್ಲು ಆರ್ ಸಿ ಗಳಿಗೆ ಮನವರಿಕೆ ಮಾಡಿಕೊಡುವಲ್ಲಿ ಸರ್ಕಾರ ವಿಫಲವಾಗಿದೆ.ಈಗಾಗಲೇ ಸರ್ಕಾರ ತಮಿಳುನಾಡಿಗೆ ನೀರು ಹರಿದಿದೆ.ಮೊದಲು 10 ಸಾವಿರ ಕ್ಯೂಸೆಕ್ ನೀರು ಬಿಟ್ಟಿದ್ದೇ ತಪ್ಪು.ಆಗಲೇ ಎಚ್ಚೆತ್ತು‌ ಕಾನೂನು ಹೋರಾಟಕ್ಕೆ ಸಿದ್ದವಾಗಬೇಕಿತ್ತು.ಕಾವೇರಿ ಜಲಾನಯದ ಹಲವು ಹಳ್ಳಿಗಳು, ಬೆಂಗಳೂರು ನಗರ ಕಾವೇರಿ ಮೇಲೆಯೇ ಅವಲಂಬಿತವಾಗಿವೆ.ಈಗಲೂ ರಾಜ್ಯ ಸರ್ಕಾರ ತಮ್ಮ ಕಾನೂನು ತಂಡವನ್ನು ಸಿದ್ದಮಾಡಿ ನ್ಯಾಯಾಲಯಕ್ಕೆ ಮನವರಿಕೆ ಮಾಡಿ ನೀರು ಹರಿಸುವುದನ್ನ ನಿಲ್ಲಿಸಲಿ ಎಂದು ಗೋವಿಂದ ಕಾರಜೋಳ ಹೇಳಿದ್ದಾರೆ.
 
ಇನ್ನೂ ಕಾವೇರಿ ನೀರಿನ ರೈತರ ಹೋರಾಟಕ್ಕೆ ಬಿಜೆಪಿಯ ಬೆಂಬಲ ಇರಲಿದೆ.ಕಾಂಗ್ರೆಸ್ ಸರ್ಕಾರದ್ದು ಇಬ್ಬಾಗ ನೀತಿ.ಪ್ರತಿಪಕ್ಷದಲ್ಲಿ ಇದ್ದಾಗ ಮೇಕೆದಾಟು ಪಾದಯಾತ್ರೆ ಮಾಡಿದ್ರು.ಇವರದ್ದು ಇಬ್ಬಗ ನೀತಿ, ರಾಜಕೀಯ ಲಾಭಕ್ಕಾಗಿ ತಮಿಳುನಾಡಿಗೆ ಸಹಾಯ ಮಾಡೋದು.ಪ್ರತಿಪಕ್ಷ ಇದ್ದಾಗ ರಾಜ್ಯದ ರೈತರ ಪರವಾಗಿ ವೀರವೇಷದಲ್ಲಿ ಮಾತಾಡಿ, ಜನರಿಗೆ ಮೋಸ ಮಾಡೋದು.ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿದೆ.ಮಳೆ ಕೊರತೆಯಿಂದ ರಾಜ್ಯದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.ರೈತರಿಗೆ ವಿದ್ಯುತ್ ಕೂಡ ಸಮರ್ಪಕವಾಗಿ ಕೊಡುತ್ತಿಲ್ಲ.ರಾಜ್ಯದ ಅಭಿವೃದ್ಧಿ ಬಗ್ಗೆ ಇವರಿಗೆ ಕಾಳಜಿ ಇಲ್ಲ.ನಿರಂತರವಾಗಿ ಜನರಿಗೆ ಮೋಸ ಮಾಡಿ ಇವರು ಜನರಿಂದ ಮತ ಹಾಕಿಸಿಕೊಳ್ಳೋದು ಬಿಟ್ರೆ ಬೇರ ಏನಿಲ್ಲ ಎಂದು ಬಿಜೆಪಿ ಕಚೇರಿಯಲ್ಲಿ ಮಾಜಿ ನೀರಾವರಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ನಾಮ ನಿರ್ದೇಶಿತ ಪರಿಷತ್ ಸದಸ್ಯರಿಗೆ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ