Select Your Language

Notifications

webdunia
webdunia
webdunia
webdunia

ಉಡಾವಣೆಗೂ ಮುನ್ನ ತಿರುಪತಿಗೆ ಭೇಟಿ ನೀಡಿದ ಇಸ್ರೋ ಮುಖ್ಯಸ್ಥ

ಉಡಾವಣೆಗೂ ಮುನ್ನ ತಿರುಪತಿಗೆ ಭೇಟಿ ನೀಡಿದ ಇಸ್ರೋ ಮುಖ್ಯಸ್ಥ
ಬೆಂಗಳೂರು , ಶನಿವಾರ, 2 ಸೆಪ್ಟಂಬರ್ 2023 (08:39 IST)
ತಿರುಪತಿ : ಚಂದ್ರಯಾನ-3ರ ಯಶಸ್ವಿಯ ಬೆನ್ನಲ್ಲೇ ಸೂರ್ಯನ ಮೇಲೆ ಅಧ್ಯಯನ ನಡೆಸಲು ಆದಿತ್ಯ ಎಲ್ 1 ಮಿಷನ್ ಉಡಾವಣೆಗೆ ಇಸ್ರೋ ಸಜ್ಜಾಗಿದೆ.
 
ಬಾಹ್ಯಾಕಾಶಕ್ಕೆ ನೌಕೆಯನ್ನು ಕಳುಹಿಸಲು ಕ್ಷಣಗಣನೆ ಪ್ರಾರಂಭವಾಗಿದ್ದು, ಇದರ ಯಶಸ್ಸಿಗಾಗಿ ಇಸ್ರೋ ಮುಖ್ಯಸ್ಥರಾದ ಎಸ್ ಸೋಮನಾಥ್ ಅವರು ತಿರುಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಆದಿತ್ಯ ಎಲ್ 1 ಉಡಾವಣೆಗೂ ಮುನ್ನ ಶುಕ್ರವಾರ ತಿರುಪತಿಯ ಬಾಲಾಜಿ ದೇವಾಲಯಕ್ಕೆ ಭೇಟಿ ನೀಡಿ ಎಸ್ ಸೋಮನಾಥ್ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಇಸ್ರೋವಿನ ಮುಂದಿನ ಮಿಷನ್ ಬಗ್ಗೆ ಮಾಹಿತಿ ನೀಡಿದ್ದಾರೆ. ಚಂದ್ರಯಾನ-3 ಮಿಷನ್ನ ವೈಜ್ಞಾನಿಕ ಪ್ರಯೋಗಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ.

ಆದಿತ್ಯ ಎಲ್ 1 ಶನಿವಾರ ಬೆಳಗ್ಗೆ 11:50ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಲಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕೆಲಸಕ್ಕೆ ಬಾರದವರು ಬಿಜೆಪಿ ಕಚೇರಿ ನಡೆಸುತ್ತಿದ್ದಾರೆ : ರೇಣುಕಾಚಾರ್ಯ ವಾಗ್ದಾಳಿ