Select Your Language

Notifications

webdunia
webdunia
webdunia
webdunia

ಹೊಸ ಟ್ರೆಂಡ್‌ನ ಪ್ಯಾಂಟ್ ಧರಿಸಿ ಮಾರುಕಟ್ಟೆಗೆ ಬಂದ ಸ್ನೇಹಿತನಿಗೆ ಅವಮಾನ, ಮನನೊಂದು ಯುವಕ ಮಾಡಿದ್ದೇನು

ಹೊಸ ಟ್ರೆಂಡ್‌ನ ಪ್ಯಾಂಟ್ ಧರಿಸಿ ಮಾರುಕಟ್ಟೆಗೆ ಬಂದ ಸ್ನೇಹಿತನಿಗೆ ಅವಮಾನ, ಮನನೊಂದು ಯುವಕ ಮಾಡಿದ್ದೇನು

Sampriya

ಬೆಳ್ತಂಗಡಿ , ಶನಿವಾರ, 23 ನವೆಂಬರ್ 2024 (14:49 IST)
ಬೆಳ್ತಂಗಡಿ: ಹೊಸ ಟ್ರೆಂಡ್‌ನ ಪ್ಯಾಂಟ್ ಧರಿಸಿದ್ದನ್ನು ಸ್ನೇಹಿತರು ಅವಮಾನಿಸಿ, ವಿಡಿಯೋ ಮಾಡಿ ಸಾಮಾಜಿಕ  ಜಾಲತಾಣದಲ್ಲಿ ಹರಿಬಿಟ್ಟಿದ್ದಕ್ಕೆ ಮನನೊಂದು ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನಲ್ಲಿ ನಡೆದಿದೆ.

ಘಟನೆ ಹಿನ್ನೆಲೆ:  21 ವಯಸ್ಸಿನ ಯುವಕ ವಿನೂತನ ಶೈಲಿಯ ಜೀನ್ಸ್ ಪ್ಯಾಂಟ್ ಧರಿಸಿ ಬೆಳ್ತಂಗಡಿಯ ಸಂತೆಕಟ್ಟೆ ಮಾರುಕಟ್ಟೆಗೆ ಬಂದಿದ್ದಾರೆ. ಈ ವೇಳೆ ಅವನನ್ನು  ಶಬೀರ್, ಅನೀಶ್ ಪಣಕಜೆ, ಸಲೀಂ ಎಂಬವರು ಸೇರಿ  ಲೇವಡಿ ಮಾಡಿದ್ದಾರೆ.

ನಂತರ ಮೂವರು ಸ್ನೇಹಿತರಲ್ಲಿ ಒಬ್ಬ ಯುವಕ ಎರಡು ಕೈಗಳನ್ನು ಲಾಕ್ ಮಾಡಿ ಮತ್ತಿಬ್ಬರು ಆತನ ಪ್ಯಾಂಟ್‌ನ್ನು ಗೋಣಿಚೀಲದ ಡಬ್ಬಳದಿಂದ ಹೊಲಿದು ಅದರ ವಿಡಿಯೋ ಮಾಡಿ ಅವಮಾನಿಸಿದ್ದಾರೆ. ಇನ್ನೂ ಪ್ಯಾಂಟ್‌ನ ಹರಿದ ಭಾಗವನ್ನು ಡಬ್ಬಳದಿಂದ ಹೊಲಿಯುವ ವಿಡಿಯೋವನ್ನು ಸ್ನೇಹಿತಯ  ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

ಇದರಿಂದ ಮನನೊಂದ ಯುವಕ ಫಿನಾಯಿಲ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.


Share this Story:

Follow Webdunia kannada

ಮುಂದಿನ ಸುದ್ದಿ

ಗ್ಯಾರಂಟಿಯಿಂದಲೇ ಗೆದ್ದಿದ್ದೇವೆ, ನಾವು ಹೇಳಿದ ಫಲಿತಾಂಶವೇ ಬಂದಿದೆ: ಡಿಕೆ ಶಿವಕುಮಾರ್