Publish Date: Tue, 11 Oct 2022 (16:06 IST)
Updated Date: Tue, 11 Oct 2022 (16:09 IST)
ನಾನು ಆತ್ಯಹತ್ಯೆ ಮಾಡಕೊಳ್ತೇನೆ ಎಂದು ಸ್ನೇಹಿತರಿಗೆ ಮೆಸೆಜ್ ಮಾಡಿ ಯುವಕನೋರ್ವ ಡ್ಯಾಂಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಕಲ್ಕಟ್ಟೆ ಡ್ಯಾಂನಲ್ಲಿ ಈ ಘಟನೆ ನಡೆದಿದೆ. ಕಲ್ಲಹಳ್ಳಿ ಗ್ರಾಮದ ಸಚಿನ್ ಮೃತ ಯುವಕನಾಗಿದ್ದು, ಸಾಲಬಾಧೆಯಿಂದ ಮಾನಸಿಕ ಒತ್ತಡ ತಾಳಲಾರದೆ ಡ್ಯಾಂ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗ್ತಿದೆ. ತನ್ನ ಸ್ನೇಹಿತರಿಗೆ ವಾಟ್ಸಾಪ್ ಸಂದೇಶ ಕಳುಹಿಸಿ ಸೂಸೈಡ್ ಮಾಡಿಕೊಂಡು ಮನೆಯವರಿಗೆ ತಿಳಿಸುವಂತೆ ಮನವಿ ಮಾಡಿದ್ನಂತೆ. ಮಾಹಿತಿ ತಿಳಿದ ಕೂಡಲೇ ಗುಂಡ್ಲುಪೇಟೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ರು. ಮೃತ ದೇಹವನ್ನು ಅಗ್ನಿ ಶಾಮಕ ದಳ ಸಿಬ್ಬಂದಿ ಮೇಲಕ್ಕೆ ತೆಗೆದಿದ್ದಾರೆ. ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.