Select Your Language

Notifications

webdunia
webdunia
webdunia
webdunia

ತನ್ನನ್ನು ತಾನೇ ಮದುವೆ ಆಗಲಿರುವ ಮಹಿಳೆ; ಭಾರತದಲ್ಲಿ ಇದೇ ಮೊದಲು!

ತನ್ನನ್ನು ತಾನೇ ಮದುವೆ ಆಗಲಿರುವ ಮಹಿಳೆ; ಭಾರತದಲ್ಲಿ ಇದೇ ಮೊದಲು!
bangalore , ಗುರುವಾರ, 2 ಜೂನ್ 2022 (18:44 IST)
ಗುಜರಾತ್ ನ ಮಹಿಳೆಯೊಬ್ಬಳು ತನ್ನನ್ನು ತಾನೇ ಮದುವೆ ಆಗಲು ನಿರ್ಧರಿಸಿದ್ದಾಳೆ. ಸಪ್ತಪದಿ ತುಳಿಯುವುದರಿಂದ ಹಿಡಿದು ಹನಿಮೂನ್ ವರೆಗೂ ಒಬ್ಬಳೇ ಎಲ್ಲಾ ಶಾಸ್ತ್ರನೂ ಮಾಡಿಕೊಳ್ಳಲಿದ್ದಾಳಂತೆ!
ಎಂತೆಂಥೆದೋ ಮದುವೆಗಳನ್ನು ಕೇಳಿದ್ದವರು ಇದೀಗ ಈ ಮದುವೆ ಎಂಬ ಹೊಸ ವಿಷಯವನ್ನೂ ಕೇಳಬೇಕು. ಏಕೆಂದರೆ ಮದುವೆ ಅಂದರೆ ಜೋಡಿ. ಒಬ್ಬರು ಮತ್ತೊಬ್ಬರನ್ನು ಮದುವೆ ಆಗುವುದು. ಆದರೆ ಈಕೆ ತನ್ನನ್ನು ತಾನೇ ಮದುವೆ ಆಗುತ್ತಿದ್ದಾಳೆ.
ವಡೋದರಾ ಮೂಲದ 24 ವರ್ಷದ ಕ್ಷಮಾ ಬಿಂಧು ಜೂನ್ 11ರಂದು ತನ್ನನ್ನು ತಾನೇ ಮದುವೆ ಆಗಲಿದ್ದಾಳೆ. 
ಈ ತರಹ ಮದುವೆ ಹಿಂದೆ ಆಗಿದೆಯಾ ಎಂದು ಹುಡುಕಾಡಿದೆ. ಎಲ್ಲೂ ಮಾಹಿತಿ ಸಿಗಲಿಲ್ಲ. ಆದ್ದರಿಂದ ಬಹುಶಃ ನಾನೇ ಮೊದಲು ಈ ರೀತಿ ಮದುವೆ ಆಗುತ್ತಿರುವುದು ಎಂದು ಕ್ಷಮಾ ಹೇಳಿದ್ದಾಳೆ.
ತನ್ನ ಮೇಲೆ ತನಗೆ ಅತಿಯಾದ ಪ್ರೀತಿ, ಆಕರ್ಷಣೆ ಇದ್ದಾಗ ಈ ರೀತಿ ವಿಚಿತ್ರ ಮದುವೆ ಆಗುವುದು ಸಹಜ. ಆದರೆ ಬಹಿರಂಗವಾಗಿ ಆಗುತ್ತಿರುವುದು ಇದೇ ಮೊದಲು ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

434 ಗಣ್ಯರಿಗೆ ಮರು ಭದ್ರತೆ ನೀಡಲು ಪಂಜಾಬ್ ಸರಕಾರಕ್ಕೆ ಹೈಕೋರ್ಟ್ ಸೂಚನೆ