Select Your Language

Notifications

webdunia
webdunia
webdunia
webdunia

ಮುಂಗಾರಿನಲ್ಲಿ ದೇಶದಲ್ಲಿ ಈ ಹಿಂದೆ ಊಹಿಸಿದಕ್ಕಿಂತ ಹೆಚ್ಚಿನ ಮಳೆ

ಮುಂಗಾರಿನಲ್ಲಿ ದೇಶದಲ್ಲಿ ಈ ಹಿಂದೆ ಊಹಿಸಿದಕ್ಕಿಂತ ಹೆಚ್ಚಿನ ಮಳೆ
bengaluru , ಬುಧವಾರ, 1 ಜೂನ್ 2022 (15:40 IST)

ಈ ಬಾರಿಯ ಮುಂಗಾರಿನಲ್ಲಿ ದೇಶದಲ್ಲಿ ಈ ಹಿಂದೆ ಊಹಿಸಿದಕ್ಕಿಂತ ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಂಗಳವಾರ ಹೇಳಿದೆ.
ಈ ಮಾನ್ಸೂನ್ ಋತುವಿನ ಸರಾಸರಿ ಮಳೆಯು ದೀರ್ಘಾವಧಿಯ ಸರಾಸರಿಯ ಶೇ. 103 ರಷ್ಟು ಇರಲಿದೆ ಎಂದು ನಿರೀಕ್ಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ  ಸುದ್ದಿಗಾರರಿಗೆ ತಿಳಿಸಿದರು. ದೇಶದ ಬಹುತೇಕ ಕಡೆಗಳಲ್ಲಿ ಉತ್ತಮವಾದ ಮಳೆಯ ಚಟುವಟಿಕೆ ಕಾಣಿಸುತ್ತಿದೆ ಎಂದು ಪ್ರಸ್ತುತ ಮಾನ್ಸೂನ್ ಋತುವಿನ ಮಳೆಯ ಮುನ್ಸೂಚನೆಯನ್ನು ಮೊಹಪಾತ್ರ ಬಿಡುಗಡೆ ಮಾಡಿದ್ದಾರೆ. ಮಧ್ಯ ಮತ್ತು ಪರ್ಯಾಯ ದ್ವೀಪದ ಭಾರತವು ದೀರ್ಘಾವಧಿಯ ಸರಾಸರಿ ಶೇ. 106 ರಷ್ಟು ಮಳೆ ನಿರೀಕ್ಷಿಸಬಹುದು, ಆದರೆ ಈಶಾನ್ಯ ಪ್ರದೇಶವು ಸಾಮಾನ್ಯಕ್ಕಿಂತ ಕಡಿಮೆ ಮಳೆಯನ್ನು ಪಡೆಯಬಹುದು ಎಂದು ಅವರು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಪೂನಮ್‌ ಪಾಂಡೆ ದಂಪತಿಗೆ ಸಂಕಷ್ಟ: ಗೋವಾ ಪೊಲೀಸರಿಂದ ಚಾರ್ಜ್‌ ಶೀಟ್!