Webdunia - Bharat's app for daily news and videos

Install App

ಮುಂಬೈನಿಂದ ಬಂದು ಚೆಕ್ ಪೋಸ್ಟ್ ಸ್ಕ್ರೀನಿಂಗ್ ವೇಳೆ ಮೃತಪಟ್ಟ ಮಹಿಳೆ

Webdunia
ಬುಧವಾರ, 20 ಮೇ 2020 (18:34 IST)
ರಾಜ್ಯದ ಚೆಕ್ ಪೋಸ್ಟ್ ವೊಂದರಲ್ಲಿ ಮುಂಬೈನಿಂದ ಬಂದ ಮಹಿಳೆಯೊಬ್ಬಳನ್ನು ಸ್ಕ್ರೀನಿಂಗ್ ಮಾಡುವಾಗ ಆ ಮಹಿಳೆ ಮೃತಪಟ್ಟ ಘಟನೆ ನಡೆದಿದೆ.

ಯಾದಗಿರಿ ಜಿಲ್ಲೆಯ ಯರಗೊಳ ಗ್ರಾಮದ ಸಮೀಪದ ಚೆಕ್ ಪೋಸ್ಟ್ ನಲ್ಲಿ ಸ್ಕ್ರೀನಿಂಗ್ ಮಾಡುವಾಗ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 50 ವರ್ಷದ ಮಹಿಳೆಯೊಬ್ಬಳು ಮೂರ್ಛೆ ತಪ್ಪಿ ಬಿದ್ದಳು.

ಆಕೆಯನ್ನು ಯಾದಗಿರಿ ಕೋವಿಡ್ ಆಸ್ಪತ್ರೆಗೆ ಕರೆ ತರುವ ವೇಳೆ ಮೃತಪಟ್ಟಿದ್ದಾಳೆ. ಮಹಾರಾಷ್ಟ್ರ ರಾಜ್ಯದ ಮುಂಬೈನ ಭರತ ನಗರ ಪ್ರದೇಶದಿಂದ ಖಾಸಗಿ ಕಾರೊಂದರಲ್ಲಿ ಅವರು ಯಾದಗಿರಿ ಜಿಲ್ಲೆಯ ಅರಕೇರಾ.ಕೆ ಗ್ರಾಮದ ಬಸವನಗರ ತಾಂಡಾಕ್ಕೆ ತೆರಳುತ್ತಿದ್ದರು.

ಚೆಕ್‌ ಪೋಸ್ಟ್ ನಲ್ಲಿ ತಪಾಸಣೆ ವೇಳೆ ಮಹಿಳೆ ಕುಸಿದು  ಬಿದ್ದಿದ್ದು, ಕೊರೊನಾ ಶಂಕೆ ವ್ಯಕ್ತವಾಗಿದೆ. ಮುಂಜಾಗ್ರತಾ ಕ್ರಮವಾಗಿ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments