Select Your Language

Notifications

webdunia
webdunia
webdunia
webdunia

ಮುಂಬೈನಿಂದ ಬಂದ ಎರಡು ಕುಟುಂಬದವರಲ್ಲಿ ಡೆಡ್ಲಿ ಕೊರೊನಾ

ಮುಂಬೈನಿಂದ ಬಂದ ಎರಡು ಕುಟುಂಬದವರಲ್ಲಿ ಡೆಡ್ಲಿ ಕೊರೊನಾ
ತುಮಕೂರು , ಬುಧವಾರ, 20 ಮೇ 2020 (18:10 IST)
ಮುಂಬೈನಿಂದ ಕಾರಿನಲ್ಲಿ ಜಿಲ್ಲೆಗೆ ಆಗಮಿಸಿದ್ದ ಆರು ಜನರಲ್ಲಿ ನಾಲ್ವರಿಗೆ ಕೊರೋನಾ ಸೋಂಕಿರುವುದು ಪತ್ತೆಯಾಗಿದೆ.

ಹೀಗಂತ ತುಮಕೂರು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ತಿಳಿಸಿದ್ದಾರೆ.

ಎರಡು ಕುಟುಂಬದ ಒಟ್ಟು ಆರು ಮಂದಿ ಮುಂಬೈನಿಂದ ಪ್ರವಾಸ ಮಾಡಿದ್ದು, ಜಿಲ್ಲೆಗೆ ಬಂದ ತಕ್ಷಣ ಅವರನ್ನು ಕ್ವಾರಂಟೈನ್ ಮಾಡಲಾಗಿತ್ತು. ಈ ಆರು ಮಂದಿಯಲ್ಲಿ ನಾಲ್ವರಿಗೆ ಸೋಂಕು ಪತ್ತೆಯಾಗಿದೆ. ಸೋಂಕಿತರಲ್ಲಿ ಇಬ್ಬರು ಮಹಿಳೆಯರು, ಇಬ್ಬರು ಮಕ್ಕಳು ಇದ್ದಾರೆ.

ಸೋಂಕಿತರನ್ನು ಐಸೋಲೇಶನ್ ಗೆ ಒಳಪಡಿಸಲಾಗಿದ್ದು, ಇಬ್ಬರನ್ನು ಕ್ವಾರಂಟೈನ್ ಮಾಡಲಾಗಿದೆ. ಸೋಂಕಿತರು ಜಿಲ್ಲೆಗೆ ಬಂದ ತಕ್ಷಣ ಕ್ವಾರಂಟೈನ್ ಮಾಡಿರುವುದರಿಂದ ಪ್ರಾಥಮಿಕ ಸಂಪರ್ಕ ಇಲ್ಲ ಎಂದು ತಿಳಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಹಾಸನದಲ್ಲಿ ಒಂದೇ ದಿನ 21 ಜನರಲ್ಲಿ ಕೊರೊನಾ : ಮುಂಬೈ, ತಮಿಳುನಾಡು ಕಾಟ