Select Your Language

Notifications

webdunia
webdunia
webdunia
webdunia

ಹೊರರಾಜ್ಯದಿಂದ ಬರುವರಿಗೆ ಇ-ಪಾಸ್ ಕಡ್ಡಾಯ

ಹೊರರಾಜ್ಯದಿಂದ ಬರುವರಿಗೆ ಇ-ಪಾಸ್ ಕಡ್ಡಾಯ
ಕಾರವಾರ , ಬುಧವಾರ, 20 ಮೇ 2020 (17:58 IST)
ಹೊರ ರಾಜ್ಯದಿಂದ ಬರುವವರು ಕಡ್ಡಾಯವಾಗಿ ಸೇವಾ ಸಿಂಧು ಪೋರ್ಟಲ್‌ನಲ್ಲಿ ನೊಂದಣಿ ಮಾಡಿಕೊಂಡು ಇ-ಪಾಸ್ ಹೊಂದಿರಬೇಕಾಗುತ್ತದೆ.

ಕೋವಿಡ್- 19 ಸೋಂಕು ತಡೆಗೆ  ಕೇಂದ್ರ ಹಾಗೂ ರಾಜ್ಯ ಸರಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಅನುಸರಿಸಿಕೊಂಡು, ಮೇ 31 ರವರೆಗೆ ಸಂಜೆ 6 ರಿಂದ ಬೆಳಗಿನ 7 ಗಂಟೆವರೆಗೆ ಎಲ್ಲ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶಕುಮಾರ ಕೆ. ಹೇಳಿದ್ದಾರೆ.

ಹೊರ ರಾಜ್ಯದಿಂದ ಜಿಲ್ಲೆಗೆ ಬರುವವರು ಕಡ್ಡಾಯವಾಗಿ ಸೇವಾ ಸಿಂಧು ಪೋರ್ಟಲ್‌ನಲ್ಲಿ ನೊಂದಣಿ ಮಾಡಿಕೊಂಡು ಇ-ಪಾಸ್ ಹೊಂದಿರಬೇಕಾಗುತ್ತದೆ. ಇನ್ನೂ ರಾಜ್ಯದಲ್ಲಿ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಮತ್ತು ತಾಲೂಕುಗಳಿಂದ ತಾಲೂಕುಗಳಿಗೆ ತೆರಳಲು ಪಾಸ್‌ನ ಅವಶ್ಯಕತೆ ಇರುವುದಿಲ್ಲ.  

ಆದರೆ ಸಾರ್ವಜನಿಕರು ಮುಖಗವಸು ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಮದುವೆ ಸಮಾರಂಭಕ್ಕೆ 50 ಜನ ಹಾಗೂ ಶವ ಸಂಸ್ಕಾರಕ್ಕೆ 20 ಜನರಿಗೆ ಮಾತ್ರ ಅವಕಾಶವಿರುತ್ತದೆ ಎಂದಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಮುಂಬೈ ಕಾಟ : ಕಲಬುರಗಿಯಲ್ಲಿ ಮತ್ತೆ 7 ಕೊರೋನಾ