ಪಾವಗಡ ಪಟ್ಟಣದ SSK ಕಾಲೇಜು ಬಳಿ ಹಾಡು ಹಗಲೇ ಚಿರತೆ ಪ್ರತ್ಯಕ್ಷವಾಗಿದ್ದು, ಜನ ಭಯಭಿತರಾಗಿದ್ರು. ಈ ಹಿಂದೆ ಕರಡಿ ಕಾಣಿಸಿಕೊಂಡು ಜನರು ಭಯಭೀತರಾಗಿದ್ದು, ಸದ್ಯ ಚಿರತೆ ಪ್ರತ್ಯಕ್ಷವಾಗಿರೊದ್ರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ. ಭಯಗೊಂಡ ಜನ ಕಾಡು ಪ್ರಾಣಿಗಳ ಹಾವಳಿ ತಪ್ಪಿಸುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ. ಹೀಗೆ ಇನ್ನೊಂದು ವಿಡಿಯೋ ವೈರಲ್ ಆಗಿದ್ದು, ಟ್ರಾಕ್ಟರ್ ಚಾಲಕ ಚಿರತೆ ನೀರು ಕುಡಿಯುತ್ತಿರುವ ದೃಶ್ಯವನ್ನು ಸೆರೆ ಹಿಡಿದಿದ್ದಾನೆ.