Select Your Language

Notifications

webdunia
webdunia
webdunia
webdunia

ಬಿ ಹೆಚ್ ಇ ಎಲ್ ಜಂಕ್ಷನ್ ನಿಂದ ಯಶವಂತಪುರ ರಸ್ತೆ ಬಂದ್..!

ಬಿ ಹೆಚ್ ಇ ಎಲ್ ಜಂಕ್ಷನ್ ನಿಂದ ಯಶವಂತಪುರ ರಸ್ತೆ ಬಂದ್..!
bangalore , ಗುರುವಾರ, 18 ಆಗಸ್ಟ್ 2022 (15:07 IST)
ಬಿಹೆಚ್‌ಇಎಲ್ ಜಂಕ್ಷನ್ ನಿಂದ ಯಶವಂತಪುರದ ಸರ್ಕಲ್ ವರೆಗೆ ಸಂಪೂರ್ಣ ವಾಹನ ಸಂಚಾರವನ್ನು ನಿರ್ಬಂದಿಸಲಾಗಿರುವುದರಿಂದ ಸಿವಿ ರಾಮನ್ ರಸ್ತೆಯಲ್ಲಿ ಚಲಿಸುವ ಎಲ್ಲಾ ಸಾರ್ವಜನಿಕರು ಈ ರಸ್ತೆಯಯಲ್ಲಿ ಚಲಿಸುವಂತಿಲ್ಲ.ಬದಲಿಗೆ ಪರ್ಯಾಯ ಮಾರ್ಗವನ್ನು ಬಳಸಲು ಸೂಚಿಸಲಾಗಿದೆ. ಮಲ್ಲೇಶ್ವರ 18ನೇ ಕ್ರಾಸ್ ಕಡೆಯಿಂದ ಬರುವ ವಾಹನಗಳು ಸದಾಶಿವ ಪೊಲೀಸ್ ಠಾಣೆ ಸರಹದ್ದಿನ ಸರ್ಕಲ್ ಮಾರಮ್ಮ ಜಂಕ್ಷನ್ ಬಳಿ ಎಡ ತಿರುವನ್ನು ಪಡೆದು ಮಲ್ಲೇಶ್ವರ ಮಾರ್ಗೋಸ ರಸ್ತೆ ಮೂಲಕ ಮಲ್ಲೇಶ್ವರ 15ನೇ ಕ್ರಾಸ್‌ನಲ್ಲಿ ಬಲತಿರುವನ್ನು ಪಡೆದು ಯಶವಂತಪುರ 8ನೇ ಮುಖ್ಯರಸ್ತೆ ಮೂಲಕ ಯಶವಂತಪುರ ಸರ್ಕಲ್‌ಗೆ ವಾಹನ ಸಂಚರಿಸಬಹುದಾಗಿರುತ್ತದೆ.ಸರ್ ಸಿವಿ ರಾಮನ್ ರಸ್ತೆಯಲ್ಲಿ ಮೇಖ್ರಿ ಸರ್ಕಲ್ ಕಡೆಯಿಂದ ಬರುವ ವಾಹನಗಳು ಸದಾಶಿವನಗರ ಪೊಲೀಸ್ ಠಾಣೆ ಜಂಕ್ಷನ್ ನಲ್ಲಿ ಬಲ ತಿರುವು ಪಡೆದು ಕುವೆಂಪು ಸರ್ಕಲ್ ಬಿಇಎಲ್ ಸರ್ಕಲ್ ಮೂಲಕ ವಾಹನ ಸಾಗಬಹುದಾಗಿರುತ್ತದೆ. ಸದಾಶಿವನಗರದ ಕಡೆಯಿಂದ ಯಶವಂತಪುರದ ಕಡೆಗೆ ಬರುವ ವಾಹನಗಳು ಮಲ್ಲೇಶ್ವರ ಮಾರ್ಗೋಸ ರಸ್ತೆ ಮೂಲಕ ಮಲ್ಲೇಶ್ವರ 15ನೇ ಕ್ರಾಸ್‌ನಲ್ಲಿ ಬಲತಿರುವನ್ನು ಪಡೆದು ಯಶವಂತಪುರ 8ನೇ ಮುಖ್ಯರಸ್ತೆ ಮೂಲಕ ಯಶವಂತಪುರ ಸರ್ಕಲ್‌ಗೆ ವಾಹನ ಸಂಚರಿಸಬಹುದಾಗಿರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ದಯಾಮರಣಕ್ಕೆ ಅನುಮತಿ ನೀಡಿ ಎಂದು ಮಂಗಳಮುಖಿಯರ ಬೇಡಿಕೆ..!