Publish Date: Sun, 25 Jun 2023 (12:44 IST)
Updated Date: Sun, 25 Jun 2023 (11:10 IST)
ಬೆಂಗಳೂರು : ತಪ್ಪುಗ್ರಹಿಕೆಯಿಂದಾಗಿ ಸಿನಿಮೀಯ ಶೈಲಿಯಲ್ಲಿ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡು ದುರಂತ ಅಂತ್ಯ ಕಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಧಾರ ಸಂಶುಕ ಹಾಗೂ ದೀಪೇಂದ್ರ ಕುಮಾರ್ ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು. ಧಾರ ಸಂಶುಕ ಉತ್ತರ ಪ್ರದೇಶ ಮೂಲದವಳಾಗಿದ್ದಳು. ದೀಪೇಂದ್ರ ಮತ್ತು ಧಾರ ಸಂಶುಕ ಪರಸ್ಪರ ಪ್ರೀತಿಸುತ್ತಿದ್ದು, ಕಳೆದ ಒಂದು ವಾರದ ಹಿಂದೆ ಧಾರ ಸಂಶುಕ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಇದರಿಂದಾಗಿ ದೀಪೇಂದ್ರ ಕುಮಾರ್ ಧಾರ ಸಂಶುಕಳನ್ನು ಅವಳ ಪೋಷಕರು ತವರಿಗೆ ಕರೆದುಕೊಂಡು ಹೋಗಿದ್ದಾರೆ ಎಂದು ಭಾವಿಸಿದ್ದಾನೆ.
ಇದರಿಂದ ನೊಂದ ದೀಪಕ್ ಕುಮಾರ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ. ಈ ವಿಚಾರ ಎರಡು ದಿನಗಳ ಬಳಿಕ ಯುವತಿಗೆ ತಿಳಿದಿದೆ.