Select Your Language

Notifications

webdunia
webdunia
webdunia
webdunia

ರಾಜ್ಯದಲ್ಲಿ ಒಟ್ಟು 464 ಸಕ್ರಿಯ ಕೊವಿಡ್ ಕೇಸ್​​ ವರದಿ

ರಾಜ್ಯದಲ್ಲಿ ಒಟ್ಟು 464 ಸಕ್ರಿಯ ಕೊವಿಡ್ ಕೇಸ್​​ ವರದಿ
bangalore , ಬುಧವಾರ, 27 ಡಿಸೆಂಬರ್ 2023 (21:00 IST)
ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 74 ಮಂದಿಗೆ ಕೊರೊನಾ ಪಾಸಿಟಿವ್‌ ಆಗಿದ್ದು, ಇಬ್ಬರು ಮೃತಪಟ್ಟಿದ್ದಾರೆ.ದಕ್ಷಿಣ ಕನ್ನಡದ 51 ವರ್ಷ ಮತ್ತು ಮೈಸೂರಿನ 51 ವರ್ಷದ ವ್ಯಕ್ತಿಗಳು ಕೊರೊನಾದಿಂದ ಮೃತಪಟ್ಟಿದ್ದಾರೆ.
 
ಒಟ್ಟು 6,403 ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದ್ದು 74 ಮಂದಿಗೆ ಕೊರೊನಾ ಬಂದಿದೆ. ಈ ಪೈಕಿ ಬೆಂಗಳೂರಿನಲ್ಲೇ 57 ಮಂದಿಗೆ ಸೋಂಕು ಬಂದಿದೆ. ರಾಜ್ಯದಲ್ಲಿ ಒಟ್ಟು 464 ಸಕ್ರೀಯ ಕೇಸ್‌ಗಳಿದ್ದು, 423 ಮಂದಿ ಮನೆಯಲ್ಲೇ ಕ್ವಾರಂಟೈನ್‌ ಆಗಿದ್ದಾರೆ. 41 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಪೈಕಿ 16 ಮಂದಿ ಐಸಿಯುನಲ್ಲಿದ್ದರೆ 25 ಮಂದಿ ಜನರಲ್‌ ಬೆಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರು ಬಿಟ್ಟರೆ ಮೈಸೂರಿನಲ್ಲಿ ಅತಿ ಹೆಚ್ಚು 32 ಸಕ್ರೀಯ ಪ್ರಕರಣ ದಾಖಲಾಗಿವೆ. ಶಿವಮೊಗ್ಗ 9, ದಕ್ಷಿಣ ಕನ್ನಡ 8, ಹಾಸನ 8, ಮಂಡ್ಯದಲ್ಲಿ 5 ಸಕ್ರೀಯ ಪ್ರಕರಣಗಳಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರತಾಪ್​​ ಸಿಂಹ ವಿರುದ್ಧ FIR ದಾಖಲು