Select Your Language

Notifications

webdunia
webdunia
webdunia
webdunia

25 ಆಸ್ಪತ್ರೆಗಳ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದ ಕೃತಜ್ಞಾ ರಥ

25 ಆಸ್ಪತ್ರೆಗಳ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದ ಕೃತಜ್ಞಾ ರಥ
bangalore , ಶುಕ್ರವಾರ, 23 ಜುಲೈ 2021 (19:10 IST)
ಬೆಂಗಳೂರು: ಕೋವಿಡ್ ಸಂದರ್ಭದಲ್ಲಿ ಶ್ರಮಿಸಿದ ಆರೋಗ್ಯ ಕಾರ್ಯಕರ್ತರನ್ನು ಸನ್ಮಾನಿಸುವ ಕಾವೇರಿ ಆಸ್ಪತ್ರೆಯೂ ಈಗಾಗಲೇ 25ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ತೆರಳಿ ಸನ್ಮಾನಿಸಿದೆ.
ಗುರುವಾರ ಸೆಂಟ್ ಜಾನ್ಸ್ ಆಸ್ಪತ್ರೆಗೆ ತೆರಳಿದ ತಂಡವು, ಅಲ್ಲಿನ ವೈದ್ಯರು ಹಾಗೂ ನರ್ಸ್ ಹಾಗೂ ಇತರೆ ಸಿಬ್ಬಂದಿಗೆ ಸನ್ಮಾನ ಮಾಡಿದರು.  ಸನ್ಮಾನ ಸ್ವೀಕರಿಸಿ ಮಾತನಾಡಿದ ಸೆಂಟ್ ಜಾನ್ಸ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಉಪನಿರ್ದೇಶಕ ಜಾನ್ ವಗೀಸ್ ಮಾತನಾಡಿ, ನಮ್ಮ ಆಸ್ಪತ್ರೆಯಲ್ಲಿ ಕೋವಿಡ್ ಸಂದರ್ಭದಲ್ಲಿ ಸಾವಿರಕ್ಕೂ ಹೆಚ್ಚು ಜನರು ದಾಖಲಾಗುತ್ತಿದ್ದರು. ನಮ್ಮ ವೈದ್ಯ , ನರ್ಸ್ ಹಾಗೂ ಇತರೆ ತಂಡಗಳು ಹಗಲಿರುಳು ಶ್ರಮಿಸಿವೆ. ಅವರ ತ್ಯಾಗಕ್ಕೆ ಕಾವೇರಿ ಆಸ್ಪತ್ರೆ ವತಿಯಿಂದ ಕೃತಜ್ಞತೆ ಸಲ್ಲಿಸುತ್ತಿರುವುದು ಅತ್ಯಂತ ಸಂತೋಷದ ವಿಷಯ. ಪ್ರತಿಯೊಬ್ಬರು ಅವರಿಗೆ ಧನ್ಯವಾದ ಸಲ್ಲಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ವಿಕ್ಟೋರಿಯಾ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಕೃಷ್ಣ ಮಾತನಾಡಿ, ಕೃತಜ್ಞ ಕಾರ್ಯಕ್ರಮದ ಭಾಗವಾಗಿ ಮೊದಲ ದಿನದಂದೇ ವಿಕ್ಟೋರಿಯಾ ಆಸ್ಪತ್ರೆ ಆರೋಗ್ಯ ಸಿಬ್ಬಂದಿಯನ್ನು ಸನ್ಮಾನಿಸಿದ್ದು ಖುಷಿ ನೀಡಿದೆ. ಇವರ ಕಾರ್ಯ ಶ್ಲಾಘನೀಯ ಎಂದರು.
ಕೋವಿಡ್ ವಾರಿಯರ್‌ಗಳನ್ನು  ಗುರುತಿಸಿ ಸನ್ಮಾನಿಸುವ ನಿಟ್ಟಿನಲ್ಲಿ ಜುಲೈ ೧೯ ರಂದು ೫ ಕೃತಜ್ಞ ರಥಗಳು ನಗರದಲ್ಲಿನ ೩೦೦ಕ್ಕೂ ಹೆಚ್ಚು ಆಸ್ಪತ್ರೆಗೆ ತೆರಳಲಿವೆ.  ಜೊತೆಗೆ ಹೃತಾತ್ಮ ಆರೋಗ್ಯ ಕಾರ್ಯಕರ್ತರ ಮಕ್ಕಳಿಗೆ ಶಿಕ್ಷಣ ಒದಗಿಸಲು ೨ ಲಕ್ಷ ರು. ವಿದ್ಯಾರ್ಥಿ ವೇತನ ಹಾಗೂ ಉದ್ಯೋಗ ಕೊಡಿಸಲಿದೆ.
ವಾರಾಂತ್ಯದ ಕರ್ಫ್ಯೂ ಸಮಯದಲ್ಲಿ ಬಿಎಂಟಿಸಿ ಸೇವೆಗಳ ಕಾರ್ಯಾಚರಣೆ ಬಗ್ಗೆ

Share this Story:

Follow Webdunia kannada

ಮುಂದಿನ ಸುದ್ದಿ

ಶೀಲಹಳ್ಳಿ ಸೇತುವೆ ಮುಳುಗಡೆ