Select Your Language

Notifications

webdunia
webdunia
webdunia
webdunia

ಬಿ.ಜೆ.ಪಿ ಭಾವುಟವನ್ನು ಹಾರಿಸಿದ ಮಹಾ ನಾಯಕ ನನ್ನು ಕಿತ್ತೊಗೆಯುವ ಕೆಲಸಕ್ಕೆ ಕೈ ಹಾಕಿರುವ ಹೈ ಕಮಾಂಡ್

ಬಿ.ಜೆ.ಪಿ ಭಾವುಟವನ್ನು ಹಾರಿಸಿದ ಮಹಾ ನಾಯಕ ನನ್ನು ಕಿತ್ತೊಗೆಯುವ ಕೆಲಸಕ್ಕೆ  ಕೈ ಹಾಕಿರುವ ಹೈ ಕಮಾಂಡ್
bangalore , ಬುಧವಾರ, 21 ಜುಲೈ 2021 (20:58 IST)
ಬೆಂಗಳೂರು: ಕರ್ನಾಟಕದ ನೀರಿಕ್ಷೆಗೆ ಹೆಚ್ಚು ಫಲ ಬಿ.ಜೆ.ಪಿ ಹೈ ಕಮಾಂಡ್ ನೀಡಿಲ್ಲ, ಅದರೂ ನಮ್ಮ ನಾಡಿನಲ್ಲಿ ಗಂಡೆದೆಯಿಂದ ಪಕ್ಷವನ್ನು ಕಟ್ಟಿ, ದಕ್ಷಿಣ ಭಾರತದಲ್ಲಿ ಬಿ.ಜೆ.ಪಿ ಭಾವುಟವನ್ನು ಹಾರಿಸಿದ್ದಂತಹ ಮಹಾ ನಾಯಕ ಯಡಿಯೂರಪ್ಪ ರನ್ನು  ಅಧಿಕಾರದಿಂದ ಕಿತ್ತೊಗೆಯುವ ಕೆಲಸಕ್ಕೆ ಕೈ ಹಾಕುವ  ಮೂಲಕ ನಿಮ್ಮ ಸಿದ್ದಂತವನ್ನು ಇಡೀ ಕನ್ನಡಿಗರಿಗೆ ತೋರಿಸಿಕೊಡುತ್ತಿದ್ದೀರ. ನಾವು ಕನ್ನಡಿಗರೆಲ್ಲರೂ ಒಮ್ಮತದ  ನಿರ್ಧಾರಕ್ಕೆ ಬರಬೇಕಾಗುತ್ತದೆ ಎಂದು ಕರ್ನಾಟಕ  ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಎಚ್ಚರಿಸಿದರು
 
ಸಿ.ಎಂ ಬದಲಾವಣೆ ವಿಚಾರವಾಗಿ ಸಾಕಷ್ಟು ಬೆಳವಣಿಗೆಗಳು ಕಂಡು ಬರುತ್ತಿರುವ ಹಿನ್ನಲೆಯಲ್ಲಿ ಕನ್ನಡ ಪರ ಸಂಘಟನೆಯಾದ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಮಾತನಾಡಿ ಕರ್ನಾಟಕ ರಕ್ಷಣಾ ವೇದಿಕೆ ಇಲ್ಲಿ ವೆರೆಗೂ ಯಾವುದೇ ರಾಜಕೀಯ ಪಕ್ಷಕ್ಕೆ ಬೆಂಬಲ ಕೊಟ್ಟಿಲ್ಲ. ನಾವು ಅನೇಕ ಸಂದರ್ಭಗಳಲ್ಲಿ ಮಾಜಿ ಮುಖ್ಯಮತ್ರಿ ಕುಮಾರಸ್ವಾಮಿ ಜೊತೆಗೆ ಹೋರಾಟದಲ್ಲಿ ಭಾಗಿಯಾಗಿದ್ದೇವೆ. ಸಿದ್ದರಾಮಯ್ಯ ಸೋತಾಗ ವಿರೋಧ ಪಕ್ಷದ ನಾಯಕರಾಗಿದ್ದಾಗ ಭೇಟಿ ಮಾಡಿದ್ದೇವೆ, ಉತ್ತಮ ಸಂಬಂಧ ಹೊಂದಿದ್ದೇವೆ ಎಂದು ತಿಳಿಸಿದರು. 
 
ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿದು, ಕೆ.ಜೆ.ಪಿ ಪಕ್ಷ ಮಾಡಿದಾಗ ಕರ್ನಾಟಕದ ಪಕ್ಷವಾಗುತ್ತದೆ ಎಂದು ಬೆಂಬಲಿಸಿದ್ದೇವೆ. ಇವರೆಲ್ಲರೂ ಕನ್ನಡಿಗರೇ, ನಮಗೆ ಇವರೆಲ್ಲರ ಮೇಲೆ ಹೆಮ್ಮೆ ಇದೆ, ಇನ್ನು ಅನೇಕ ಜನ ರಾಜಕಾರಣಿಗಳ ಬೆಗ್ಗೆ ನಮಗೆ ಹೆಮ್ಮೆ ಗೌರವ ಎರಡೂ ಇದೆ ಎಂದು ಹೇಳಿದರು.
 
ಕನ್ನಡದ ಕರ್ನಾಟಕ  ಕೆಲಸವಾಗಬೇಕು, ಮೇಕೆ ದಾಟು ಯೋಜನೆ, ಕಳಸ ಬಂಡೂರಿ ಯೋಜನೆ, ಕನ್ನಡಲಿಗರಿಗೆ ಕೆಲಸ ಸಿಗಬೇಕು, ಕರ್ನಾಟಕ ಕನ್ನಡ ಮಯವಾಗಬೇಕು ಎಂದು ಪ್ರಾಮಾಣಿಕವಾಗಿ ಸಂಘಟನೆಯನ್ನು ಕಟ್ಟಿದ್ದೇವೆ.ಕರ್ನಾಟಕದಲ್ಲಿ ಬಗೆಗೆ ತುಂಬಾ ದೂಡ್ಡ ಅಸೆ ಇಟ್ಟುಕೊಂಡಿದ್ದೇವೆ ಎಂದರು.
 
ಆದರೆ ಕರ್ನಾಟಕದಲ್ಲಿ ಬಿ.ಜೆ.ಪಿಯನ್ನು ಕಟ್ಟಿ ಬೆಳಸಿದಂತವರು ಯಡಿಯೂರಪ್ಪ, ಸರ್ಕಾರವನ್ನು ತಂದು ಕೊಡುಗೆ ಕೊಟ್ಟವರು ಬಿ.ಎಸ್.ವೈ. ದೇಶದಲ್ಲಿ ಭಾರತೀಯ ಜನತಾ ಪಾರ್ಟಿ ಕಟ್ಟಿದಂತವರು ಅಡ್ವಾಣಿ ಮತ್ತೆ ವಾಜಪೇಯಿ ಅಂಥವರ  ಸಮಕಾಲೀನರಾಗಿ , ಹಳ್ಳಿ ಹಳ್ಳಿಗೆ ರೈತ ಪರವಾದ ಹೋರಾಟವನ್ನು ಮಾಡುತ್ತಾ ಮೇಲೆ ಬಂದ ಮಹಾನ್ ನಾಯಕ ಯಡಿಯೂರಪ್ಪ ರನ್ನು  ಒಮ್ಮೆ ಸರ್ಕಾರ ಮಾಡಲು ಹೊರಟಾಗ ಪಿತೂರಿ ನೆಡಸಿ ಭ್ರಷ್ಟಾಚಾರ ಆರೋಪವನ್ನು ಅವರ ಪಕ್ಷದ ಮುಖಂಡರೇ ಮಾಡಿದ್ದರು ಎಂದು ಹೇಳಿದರು.
 
ಪುನಃ ಹೋರಾಟವನ್ನು ಮಾಡಿ ಕೆ.ಜೆ.ಪಿ ಕಟ್ಟಿ, ಬಿಜೆಪಿ ಗೆ ಬಂದು ಅಧ್ಯೆಕ್ಷ  ಸ್ಥಾನವನ್ನು ಅಲಂಕರಿಸಿದ್ದರು. ಕುಮಾರಸ್ವಾಮಿ ನೇತೃತ್ವದ ಜೆ.ಡಿ.ಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಬೀಳಿಸಿ ಹೋರಾಟವನ್ನು ಮಾಡಿ  ಮುಖ್ಯಮಂತ್ರಿಯಾದರು. ಈ ನಿಟ್ಟಿನಲ್ಲಿ ಬಿ.ಜೆ.ಪಿ ಹೈ ಕಮಾಂಡ್ ಗೆ ಒಂದೇ ಒಂದು ಪ್ರೆಶ್ನೆಯನ್ನು ಕೇಳುತಿದ್ದೇನೆ, ಕರ್ನಾಟಕದ ಮುಖ್ಯಮಂತಿಯಾದರೆ ನೀರಾವರಿ ಸಮಸ್ಯೆಗಳು, ಉದ್ಯೋಗದ ಸಮಸ್ಯೆಗಳು, ನೆರೆ ಪರಿಹಾರ ದೊರೆಯುತ್ತದೆ ಎಂದು ಪ್ರೀತಿಯಿಂದ ಕನ್ನಡಿಗರು ವೋಟ್ ಹಾಕಿದ್ದೇವೆ. ನೀವು ಮಾಡುತ್ತಿರುವುದು ಏನು? ರಾಜ್ಯದಲ್ಲಿ,  ದಕ್ಷಿಣ ಭಾರತದಲ್ಲಿ ನಿಮಗೆ ಸರ್ಕಾರವನ್ನು ಕೊಟ್ಟ ಯಡಿಯೂರಪ್ಪ ಕನಿಷ್ಠ ಒಂದು ದಿನ ನೆಮ್ಮದಿಯಾಗಿ ಸರ್ಕಾರ ನೆಡೆಸಲು ಅವಕಾಶವನ್ನು ಕೊಟ್ಟಿದಿರಾ ? ಕೆಲವು ಪಿತೂರಿ ಸಂಚುಗಾರರಿಂದ ಯಡಿಯೂರಪ್ಪ ರನ್ನು ಬದಲಾವಣೆ ಮಾಡಿ ಹೊಸಬರನ್ನು ತರಲು ಹೊರಟು ಬಿ.ಜೆ.ಪಿ ಮುಕ್ತ ಸರ್ಕಾರವನ್ನು ಮಾಡಲು ಮುಕ್ತ ಅವಕಾಶವನ್ನು ಕೊಡುತ್ತಿದ್ದೀರಾ? ಎಂದು ಪ್ರೆಶ್ನಿಸಿದರು.
 
. ಬಿ.ಜೆ.ಪಿ ಯಲ್ಲಿ ಜಾತ್ಯತೀತ ವ್ಯಕ್ತಿ, ಎಲ್ಲಾ ಧರ್ಮಗಳ ಪರವಾಗಿ ಇರುವಂತಹ ಏಕೈಕ ವ್ಯಕ್ತಿಯೆಯೆಂದರೆ ಯಡಿಯೂರಪ್ಪ, ನಾವು ಕನ್ನಡಿಗರು ಯಾವಾಗಲು ಸಂಪೂರ್ಣ ಬೆಂಬಲವನ್ನು ಕೊಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ಎಲ್ಲಾ ಕನ್ನಡ ಪರ ಸಂಘಟನೆಗಳ ಒಮ್ಮತದ ನಿರ್ಧಾರವನ್ನು ಪ್ರಕಟಿಸುತ್ತೇವೆ. ಹೈ ಕಮಾಂಡ್ ಸಂಸ್ಕೃತಿಯಿಂದ ಕನ್ನಡದ ನೀರಾವರಿ  ಯೋಜನೆಗಳಾಗಲಿ, ಕನ್ನಡಿಗರ ಕೆಲಸಗಳಾಗಲಿ, ಯಾವುದು ಆಗುತ್ತಿಲ್ಲ, ನಮ್ಮ ನಿರೀಕ್ಷೆ ಸುಳ್ಳು ಮಾಡಿದ್ದೀರ ಎಂದು ಕಮಲ ಪಕ್ಷದ ಹೈ ಕಮಾಂಡ್ ವಿರುದ್ದ ಹರಿಹಾಯ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಜುಲೈ 23ರಂದು ಬಂಗಾಳ ಉಪಸಾಗರದ ವಾಯುವ್ಯ ಭಾಗದಲ್ಲಿ ವಾಯುಭಾರ ಕುಸಿತ