Select Your Language

Notifications

webdunia
webdunia
webdunia
webdunia

ಜಮೀನಿನಲ್ಲಿ ಟೆಂಟ್ ಹಾಕಿಕೊಂಡ ಯೋಧ

ಜಮೀನಿನಲ್ಲಿ ಟೆಂಟ್ ಹಾಕಿಕೊಂಡ ಯೋಧ
ಚಿತ್ರದುರ್ಗ , ಶನಿವಾರ, 11 ಜುಲೈ 2020 (16:18 IST)
ಬಿ ಎಸ್ ಎಫ್ ಯೋಧನೊಬ್ಬ ತಮ್ಮ ಊರಿಗೆ ಬಂದರೂ ಮನೆಗೆ ಬಾರದೇ ಜಮೀನಿನಲ್ಲಿ ಟೆಂಟ್ ಹಾಕಿಕೊಂಡು ಇದ್ದಾರೆ.

ಸ್ವಂತ ಕ್ವಾರಂಟೈನ್ ಆಗಲು ಜಮೀನಿನಲ್ಲಿ ಟೆಂಟ್ ಹಾಕಿಕೊಂಡು ಯೋಧರೊಬ್ಬರು ನೆಲೆಸಿರುವ ಘಟನೆ ಚಿತ್ರದುರ್ಗದಲ್ಲಿ  ಹಿರಿಯೂರು ತಾಲೂಕಿನ ಖಂಡೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಝಾನಸ್ಸಿಯಲ್ಲಿ  ಬಿಎಸ್ಎಫ್  ಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಯೋಗೇಶ್  ರಜೆ ಮೇಲೆ ಜುಲೈ 5 ರಂದು ಆಗಮಿಸಿದ್ದಾರೆ. ಬೆಂಗಳೂರು ಮೂಲಕ ಆಗಮಿಸಿದ ಯೋಗೇಶ್ ಆರೋಗ್ಯ ತಪಾಸಣೆ ಮಾಡಲಾಗಿದ್ದು, ಯಾವುದೇ ರೋಗ ಲಕ್ಷಣಗಳು ಕಂಡು ಬಂದಿರುವುದಿಲ್ಲ. ಆದರೂ ಕನಿಷ್ಠ ದಿನಗಳ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವೈದ್ಯರು ಸಲಹೆ ನೀಡಿದ್ದರು.

ಮನೆಯಲ್ಲಿ ಕ್ವಾರಂಟೈನ್ ಆದರೆ ಮನೆಯವರಿಗೆ ತೊಂದರೆಯಾಗಬಹುದು ಎಂದು ಅರಿತ ಯೋಗೇಶ್ ತಮ್ಮ ಜಮೀನಿನಲ್ಲಿ ಟೆಂಟ್ ಹಾಕಿಕೊಂಡು ಸೆಲ್ಪ್ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಕುಖ್ಯಾತ ಗ್ಯಾಂಗಸ್ಟರ್ ಎನ್ ಕೌಂಟರ್ ಗೆ ಬಲಿ