Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ನಗರದಲ್ಲಿ ಬೀದಿನಾಯಿಗಳ ಹಾವಳಿ

webdunia
ಬುಧವಾರ, 21 ಸೆಪ್ಟಂಬರ್ 2022 (21:38 IST)
ನಗರದ್ಯಂತ ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಲೇ ಇದೆ . ವಾರದಲ್ಲಿ ಒಂದು ಕಡೆಯಾದರೂ ನಾಯಿಗಳ ಬೇಸತ್ತು, ಅನಾರೋಗ್ಯದ ಬಗ್ಗೆ, ಆಸ್ಪತ್ರೆಗೆ ದಾಖಲಾದ ಬಗ್ಗೆ, ವರದಿಗಳು ಹೆಚ್ಚಾಗುತ್ತಿದೆ. ಬೀದಿ ನಾಯಿಗಳ ಹಾವಳಿಗೆ ಜನರಂತೂ ಭಯಭೀತಗೊಂಡಯ ಪ್ರಾಣಭಯದಲ್ಲೇ ಬದುಕಿದೆ.
 
ನಗರದಲ್ಲಿ ಬೀದಿ ನಾಯಿಗಳು ಹಿಂಡು ಹಿಂಡಾಗಿ ಓಡಾಡುತ್ತಿವೆ. ನಾಯಿ ಅಡ್ಡ ಬಂದು ಬಹಳಷ್ಟು ಮಂದಿ ಅಪಘಾತಕ್ಕೆ ಒಳಗಾಗಿದ್ದಾರೆ. ರಾತ್ರಿ ವೇಳೆ ಒಂಟಿಯಾಗಿ ಹೋಗುವವರ ಮೇಲೆ ಹಿಂಡು ಹಿಂಡಾಗಿ ದಾಳಿ ನಡೆಸುತ್ತಿವೆ. ನಾಯಿಗಳ ಹಾವಳಿಯಿಂದ ತಪ್ಪಿಸಿಕೊಂಡು ಪಾರಾಗುವುದೇ ಒಂದು ಹರಸಾಹಸದ ಕೆಲಸವಾಗಿದೆ.
ಬೀದಿ ನಾಯಿಗಳು ಯಾವಾಗ ಹೇಗೆ ದಾಳಿ ಮಾಡುತ್ತವೆ ಅಂತಾ ಗೊತ್ತಾಗುವುದೇ ಇಲ್ಲ, ನಾಯಿಗಳ ಮಿತಿಮೀರಿದ ವರ್ತನೆಯಿಂದ ಜನರು ಭಯಭೀತಗೊಂಡಿದ್ದು ನಾಯಿಗಳ ಹಾವಳಿಗಳ ವಿರುದ್ಧ ಸಾರ್ವಜನಿಕರು  ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
 
ಇನ್ನೂ ನಗರದ ಯಾವುದೇ ವಾರ್ಡ್ ಗೆ ಹೋದರೂ ನಾಯಿಗಳು ಹಿಂಡು ಹಿಂಡಾಗಿ ಬರುತ್ತದೆ. ಗುಂಪು ಗುಂಪಾಗಿ ಸುತ್ತಾಡುವ ನಾಯಿಗಳು ದಾರಿಯಲ್ಲಿ ಸಂಚರಿಸುವ ವಾಹನ ಸವಾರರನ್ನು ಅಟ್ಟಿಸಿಕೊಂಡು ಹೋಗುತ್ತವೆ. ಕೆಲವು ವೇಳೆ ಶಾಲಾ ಮಕ್ಕಳ ಮೇಲೂ ದಾಳಿ ಮಾಡಿವೆ. ಮಕ್ಕಳ ಮೇಲೆ ನಾಯಿಗಳ ದಾಳಿ ನಡೆದಾಗ, ಆ ಸಂದರ್ಭದಲ್ಲಿ ಸಾರ್ವಜನಿಕರ ಕೂಗು ಎದ್ದಾಗ ದಿಢೀರ್ ಕ್ರಮದ ಭರವಸೆ ನೀಡುವುದು ಮಹಾನಗರ ಪಾಲಿಕೆಯ ಕೆಲಸವಾಗಿದೆ. ಆದ್ರೆ ಪಾಲಿಕೆ ಯಾವುದೇ ಕ್ರಮ ಜರುಗಿಸದೆ ಜಾಣ ಮೌನಕ್ಕೆ ಶರಣಾಗುತ್ತದೆ. ವರ್ಷಗಳು ಉರುಳಿ ಹೋಗುತ್ತಿವೆಯೇ ಹೊರತು ನಾಯಿಗಳ ನಿಯಂತ್ರಣ ಮಾತ್ರ ಸಾಧ್ಯವಾಗುತ್ತಿಲ್ಲ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಪೌರ ಕಾರ್ಮಿಕರಿಗೆ ಟ್ವೀಟ್ ಮೂಲಕ ಪರಿಹಾರ ಘೋಷಣೆ ಮಾಡಿದ ಸಿಎಂ