Select Your Language

Notifications

webdunia
webdunia
webdunia
webdunia

ನಾಯಿಯಲ್ಲಿ ಮಂಕಿಪಾಕ್ಸ್ ಪತ್ತೆ!

ನಾಯಿಯಲ್ಲಿ ಮಂಕಿಪಾಕ್ಸ್ ಪತ್ತೆ!
ಪ್ಯಾರಿಸ್ , ಗುರುವಾರ, 18 ಆಗಸ್ಟ್ 2022 (09:56 IST)
ಪ್ಯಾರಿಸ್ : ಕೋವಿಡ್ ಬಳಿಕ ಇದೀಗ ಮಂಕಿಪಾಕ್ಸ್ ಸೋಂಕಿನ ಬಗ್ಗೆ ಜಾಗತಿಕವಾಗಿ ಭೀತಿ ಹೆಚ್ಚಿರುವ ಬೆನ್ನಲ್ಲೇ ನಾಯಿಯೊಂದರಲ್ಲೂ ಸೋಂಕು ದೃಢಪಟ್ಟಿರುವ ಘಟನೆ ಫ್ರಾನ್ಸ್ನಲ್ಲಿ ನಡೆದಿದೆ.

ಇದೇ ಮೊದಲ ಬಾರಿಗೆ ನಾಯಿಗೂ ಮಂಕಿಪಾಕ್ಸ್ ಸೋಂಕು ತಗುಲಿರುವುದನ್ನು ಫ್ರೆಂಚ್ ಸಂಶೋಧಕರು ದೃಢಪಡಿಸಿದ್ದಾರೆ. ಮಾನವರಿಂದಲೇ ನಾಯಿಗೂ ಸೋಂಕು ಹರಡಿರುವುದಾಗಿ ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.

ವರದಿಗಳ ಪ್ರಕಾರ, ಸೋಂಕಿತ ನಾಯಿಯ ಮಾಲೀಕ ಸಲಿಂಗಕಾಮಿಯಾಗಿದ್ದು, ಅವರಲ್ಲಿ 12 ದಿನಗಳ ಹಿಂದೆ ಮಂಕಿಪಾಕ್ಸ್ ಲಕ್ಷಣ ಕಂಡುಬಂದಿತ್ತು. ಮಾಲೀಕರೊಂದಿಗೇ ಯಾವಾಗಲೂ ಇರುತ್ತಿದ್ದ ನಾಯಿಯಲ್ಲೂ ಬಳಿಕ ರೋಗದ ಲಕ್ಷಣಗಳು ಕಂಡುಬಂದಿದೆ. 

ನಾಯಿಯ ಮೈಯಲ್ಲೂ ಕೀವು ಇರುವ ಗುಳ್ಳೆಗಳು ಕಂಡುಬಂದಿದ್ದು, ಹೀಗಾಗಿ ನಾಯಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಮಂಕಿಪಾಕ್ಸ್ ಸೋಂಕು ಅದಕ್ಕೂ ತಗುಲಿರುವುದು ತಿಳಿದುಬಂದಿದೆ. ಈ ಮೂಲಕ ಮಾನವರಿಂದ ನಾಯಿಗೂ ಮಂಕಿಪಾಕ್ಸ್ ಹರಡುತ್ತದೆ ಎಂಬುದು ದೃಢವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಕಂಪಿಸಿದ ಭೂಮಿ! ಆತಂಕಕ್ಕೀಡಾದ ಜನತೆ