Select Your Language

Notifications

webdunia
webdunia
webdunia
webdunia

ಬರೋಬ್ಬರಿ ನಾಲ್ಕು ಗಂಟೆ ತೆಂಗಿನ ಮರ ಏರಿ ಕುಳಿತ ವ್ಯಕ್ತಿ, ಕಾರಣ ಕೇಳಿದ್ರೆ ಶಾಕ್‌

coconut tree

Sampriya

ಗದಗ , ಶುಕ್ರವಾರ, 31 ಅಕ್ಟೋಬರ್ 2025 (18:42 IST)
Photo Credit X
ಗದಗ:  ಗದಗನಲ್ಲಿ ನಡೆದ ವಿಲಕ್ಷಣ ಘಟನೆಯೊಂದರಲ್ಲಿ ವ್ಯಕ್ತಿಯೊಬ್ಬ ಬರೋಬ್ಬರಿ ನಾಲ್ಕು ಗಂಟೆಗಳ ಕಾಲ ತೆಂಗಿನ ಮರವೇರಿ ಕುಳಿತ ಘಟನೆ ನಡೆದಿದೆ. ಈತನನ್ನು ನೋಡಿ ಸ್ಥಳಿಯರು ಕಳ್ಳನೆಂದು ಭಾವಿಸಿ, ಕೆಲಕಾಲ ಆತಂಕಗೊಂಡಿದ್ದರು. 

ಬೆಳಗಾವಿಯ ಬಸವರಾಜ ಸೊಲ್ಲಾಪುರ ಎಂದು ಗುರುತಿಸಲಾದ ವ್ಯಕ್ತಿ ಗದಗದ ವಿವೇಕಾನಂದ ನಗರಕ್ಕೆ ಭೇಟಿ ನೀಡಿದ್ದಾನೆ. ತನ್ನ ಸ್ನೇಹಿತನ ಮನೆಯೆಂದು ಭಾವಿಸಿ ತಪ್ಪಾಗಿ ಬೇರೆಯವರ ಮನೆಯ ಬಾಗಿಲು ಬಡಿದಿದ್ದಾನೆ. ತಪ್ಪು ಮನೆ ಎಂದು ತಿಳಿದು ಸ್ಥಳದಿಂದ ಹೊರಟು ಹೋಗಿದ್ದಾನೆ. ಕಳ್ಳನೆಂದು ಅನುಮಾನಗೊಂಡು ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ಬಂಧನದ ಭೀತಿಯಿಂದ ಬಸವರಾಜ್ ಸಮೀಪದ ತೆಂಗಿನ ಮರ ಹತ್ತಿದ್ದಾನೆ. ಪೊಲೀಸರು ಮತ್ತು ಸ್ಥಳೀಯರು ಇಬ್ಬರೂ ಗಂಟೆಗಳ ಕಾಲ ಆತನನ್ನು ಹುಡುಕಿದ ಬಳಿಕ ಮರವೇರಿ ಕುಳಿತಿರುವುದು ಕಂಡುಬಂದಿದೆ.  ಪೊಲೀಸರು ಮತ್ತು ನಿವಾಸಿಗಳು ಪದೇ ಪದೇ ಮನವಿ ಮಾಡಿದರೂ ಅವರು ಕೆಳಗೆ ಬರಲು ನಿರಾಕರಿಸಿದರು.

ನಂತರ ಅಗ್ನಿಶಾಮಕ ಮತ್ತು ರಕ್ಷಣಾ ತಂಡ ಏಣಿಯೊಂದಿಗೆ ಆಗಮಿಸಿ ಬಸವರಾಜ್‌ಗೆ ಯಾವುದೇ ತೊಂದರೆಯಾಗದಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಸುರಕ್ಷಿತವಾಗಿ ಮರದಿಂದ ಕೆಳಗಿಳಿಸಲಾಯಿತು.

Share this Story:

Follow Webdunia kannada

ಮುಂದಿನ ಸುದ್ದಿ

ಅನಾರೋಗ್ಯ ಕಾರಣಕ್ಕೆ ತಾತ್ಕಾಲಿಕ ಬ್ರೇಕ್ ಪಡೆದ ಸಂಜಯ್ ರಾವುತ್‌ಗೆ ಮೋದಿ ವಿಶ್‌