Select Your Language

Notifications

webdunia
webdunia
webdunia
webdunia

450 ರೂಪಾಯಿ ಹಣ ಹಂಚಿಕೆ ವೇಳೆ ಜಗಳ ಓರ್ವನ ಕೊಲೆ

A person was killed in a fight during distribution of Rs 450
bangalore , ಸೋಮವಾರ, 17 ಜುಲೈ 2023 (18:00 IST)
ಜುಲೈ 8 ರಂದು ಮಲ್ಲೇಶ್ವರಂನ ಪೈಪ್ ಲೈನ್ ರಸ್ತೆಯಲ್ಲಿ ಅಪರಿಚಿತ ವ್ಯಕ್ತಿಯನ್ನ ಕೊಲೆ ಆಗಿತ್ತು,  ಸ್ಥಳಕ್ಕೆ ಭೇಟಿ ನೀಡಿದ್ದ ಮಲ್ಲೇಶ್ವರಂ ಪೊಲೀಸರು ಅಪರಿಚಿತ ವ್ಯಕ್ತಿ ಶವ ಅಂತ ಮೃತನ ಗುರುತು ಪತ್ತೆ ಹಚ್ಚಲು ಮುಂದಾಗಿದ್ರು. ಪೊಲೀಸರು ಕಳೆದ ನಾಲ್ಕೈದು ದಿನ ಸಿಸಿಟಿವಿಗಳ ಪರಿಶೀಲನೆ ನಡೆಸಿ ಮೃತನ ಗುರುತು ಪತ್ತೆ ಹಚ್ಚಿದ್ದರು. ಅದ್ರೆ ಕೊಲೆ ಆರೋಪಿಯ ಬಗ್ಗೆ ಸಣ್ಣ ಸುಳಿವು ಕೂಡ ಪತ್ತೆಯಾಗಿರಲಿಲ್ಲ. ನಂತರ ಪೊಲೀಸರು ರಸ್ತೆ ಬದಿಯ ಸಿಸಿಟಿವಿ ಪರಿಶೀಲನೆ ವೇಳೆ ಒಂದು ಸಿಸಿಟಿವಿಯಲ್ಲಿ ಓರ್ವ ವ್ಯಕ್ತಿ ಜೋರಾಗಿ ನಡೆದುಕೊಂಡು ಹೋಗುತ್ತಿದ್ದ, ಇದರ ಬೆನ್ನತ್ತಿದ ಪೊಲೀಸರು ಆರೋಪಿ ಪ್ರಭುಕುಮಾರ್ ನನ್ನ ಪತ್ತೆ ಹಚ್ಚಿದ್ದಾರೆ. 

 
ಆರೋಪಿ ಪ್ರಭುಕುಮಾರ್ ಮತ್ತು ಕೊಲೆಯಾದ ಗುರುಮೂರ್ತಿ ಕಬ್ಬಿಣದ ವಸ್ತುವೊಂದನ್ನ ಕಳ್ಳತನ ಮಾಡಿದ್ರಂತೆ. ಅದನ್ನ ಮಾರಾಟ ಮಾಡಿದ್ದು, 450 ಹಣ ಬಂದಿದೆ. ಈ ಹಣವನ್ನ ಮೂವರು ವ್ಯಕ್ತಿಗಳು ಭಾಗ ಮಾಡಿಕೊಳ್ಳುವ ವಿಚಾರಕ್ಕೆ ಜಗಳವಾಗಿದ್ದು, ಈ ವೇಳೆ ಪ್ರಭುಕುಮಾರ್ ಪೈಪ್  ನಿಂದ  ಗುರುಮೂರ್ತಿ ತಲೆ ಹೊಡೆದು ಕೊಲೆ ಮಾಡಿದ್ದಾನೆ. ಸದ್ಯ ಈ ಬಗ್ಗೆ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ವಿರುದ್ಧ ಬಸವನಗೌಡ ಯತ್ನಾಳ್ ವಾಗ್ದಾಳಿ