Select Your Language

Notifications

webdunia
webdunia
webdunia
webdunia

ಮಹಾಘಟಬಂದನ್ ಸಭೆಗೆ ಹೆಚ್ ಡಿ ಕೆ ಟೀಕೆ

ಮಹಾಘಟಬಂದನ್ ಸಭೆಗೆ ಹೆಚ್ ಡಿ ಕೆ ಟೀಕೆ
bangalore , ಸೋಮವಾರ, 17 ಜುಲೈ 2023 (16:54 IST)
ವಿಪಕ್ಷಗಳ ಸಭೆ ವಿಚಾರವಾಗಿ ಬೆಂಗಳೂರಿನಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ನಮ್ಮ ಪಕ್ಷವನ್ನು ಪಾಪ ಲೆಕ್ಕಕ್ಕೆ ಇಟ್ಟಿಲ್ಲ ಅವರು ಅಂತಾ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.ಮಹಾಘಟಬಂದನ್ ವ್ಯವಸ್ಥಾಪಕರು ಜೆಡಿಎಸ್ ಮುಳುಗಿಹೋಗಿದೆ ಅನ್ನೋ ಭ್ರಮೆಯಲ್ಲಿದ್ದಾರೆ.ಆಹ್ವಾನ ಕೊಟ್ಟರು,ಇಲ್ಲವೋ ಅನ್ನೊದಕ್ಕೆ ತಲೆ ಕೂಡ ಕೆಡಿಸಿಕೊಂಡಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
 
ಅಲ್ಲದೇ ಈ ವೇಳೆ ಎನ್ ಡಿ ಎ ಸಭೆಯಲ್ಲಿ ಭಾಗಿ ವಿಚಾರವಾಗಿಯೂ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು,ಇನ್ನೂ ದಿನಗಳಿದೆ ನೋಡೊಣ.ನಮಗೆ ಎಲ್ಲೂ ಕೂಡ ಆಹ್ವಾನ ಇಲ್ಲ.ನನ್ನ ಪಕ್ಷ ಸಂಘಟನೆ ಏನಿದೆ,ನಾಡಿನ ಸಮಸ್ಯೆ ಏನಿದೆ ಅದನ್ನ ನೋಡ್ತಿದ್ದೇನೆ ಎಂದು ಮಹಾಘಟಬಂದನ್ ಸಭೆಗೆ ಹೆಚ್ ಡಿ ಕೆ ಟೀಕೆ ಮಾಡಿದ್ದಾರೆ.42 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ರಸ್ತೆಯುದ್ದಕ್ಕೂ ಯಾರು ಮಾಡದ ಸಾಧನೆ ಮಾಡಿದ್ದೇವೆ ಅಂತ ಜೋರಾಗಿ ಬ್ಯಾನರ್ ಹಾಕಿದ್ದಾರೆ.ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಕೂತಿದ್ದಾರೆ.ರೈತರ ಸಾವು ಕಾಣಿಸುತ್ತಿಲ್ಲ.ಇಂದಿನವರೆಗೂ ಆತ್ಮಹತ್ಯೆಗೆ ಒಳಗಾಗಬೇಡಿ ಎಂದು ಸಂದೇಶ ಸರ್ಕಾರ ನೀಡಿಲ್ಲ ಇದು ಬೇಕಾಗಿಲ್ಲ ಎಂದು ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೋನಿಯಾ,ರಾಹುಲ್ ಗಾಂಧಿನ್ನ ಬರಮಾಡಿಕೊಂಡ ಸಿಎಂ